ಪಂಚಾಯತ್ ರಾಜ್ ಅಧಿನಿಯಮದ ಅನುಷ್ಟಾನಕ್ಕೆ ಸುಗ್ರಾಮ ಆಗ್ರಹ
ಉಡುಪಿ, ಜು.3: ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧಿನಿಯಮ (2ನೇ ತಿದ್ದುಪಡಿ)-2015 ರ ಸಮಗ್ರ ಅನುಷ್ಟಾನಕ್ಕೆ ಸುಗ್ರಾಮ -ಗ್ರಾಪಂ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘ- ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಬ್ರಹ್ಮಗಿರಿಯ ಪ್ರಗತಿಸೌಧದಲ್ಲಿ ಜನ ಶಿಕ್ಷಣ ಟ್ರಸ್ಟ್, ದಿ ಹಂಗರ್ ಪೋಜೆಕ್ಟ್ ಹಾಗೂ ಸುಗ್ರಾಮ ಸಂಘದ ಸಹಭಾಗಿತ್ವದಲ್ಲಿ ಪಂಚಾಯತ್ ರಾಜ್ ಅಧಿನಿಯಮ- 2015ರ ಅನುಷ್ಟಾನದ ಕುರಿತು ತಾಲೂಕಿನ ಆಯ್ದ 15 ಗ್ರಾಪಂಗಳ ಅಧ್ಯಕ್ಷೆ/ಉಪಾಧ್ಯಕ್ಷೆಯರ ಸಮಾಲೋಚನಾ ಸಭೆಯನ್ನು ಸುಗ್ರಾಮ ಸಂಘದ ಅಧ್ಯಕ್ಷೆ ಪ್ರಬಾ ಬಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಅಧಿನಿಯಮದಂತೆ ಗ್ರಾಪಂಗಳ ಸ್ಥಾಯಿ ಸಮಿತಿಗಳನ್ನು ಪುನರ್‌ರಚಿಸುವುದು, ಜನವಸತಿ ಪ್ರದೇಶಗಳನ್ನು ಗುರುತಿಸುವುದು ಮತ್ತು ಜನವಸತಿ ಸಭೆಗಳನ್ನು ನಡೆಸುವುದು, ಅಧ್ಯಕ್ಷೆ/ಉಪಾಧ್ಯಕ್ಷೆಯರ 5 ವರ್ಷದ ಪೂರ್ಣ ಅಧಿಕಾರವಧಿ ಕುರಿತು ಚರ್ಚಿಸಲಾಯಿತು.
ಅಧಿನಿಯಮದ ಸಮಗ್ರ ಅನುಷ್ಟಾನದ ಮೂಲಕ ತ್ಯಾಜ್ಯಮುಕ್ತ, ವ್ಯಾಜ್ಯಮುಕ್ತ, ಸಮೃದ್ಧ ಗ್ರಾಮ ನಿರ್ಮಾಣ, ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷ್ಟಾನ, ಸೌರ ಶಕ್ತಿ, ವಿದ್ಯುತ್ ಬಳಕೆ, ಜಲ ಸಂರಕೆಣೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿ ಕಾರ್ಯಯೋಜನೆ ರೂಪಿಸಲಾಯಿತು. ನರೇಗಾ ಮಾಜಿ ಓಂಬಡ್ಸ್‌ಮೆನ್ ಶೀನ ಶೆಟ್ಟಿ, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು.
ಅಧಿನಿಯಮದ ಸಮಗ್ರ ಅನುಷ್ಟಾನದ ಮೂಲಕ ತ್ಯಾಜ್ಯಮುಕ್ತ, ವ್ಯಾಜ್ಯಮುಕ್ತ, ಸಮೃದ್ಧ ಗ್ರಾಮ ನಿರ್ಮಾಣ, ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷ್ಟಾನ, ಸೌರ ಶಕ್ತಿ, ವಿದ್ಯುತ್ ಬಳಕೆ, ಜಲ ಸಂರಕೆಣೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿ ಕಾರ್ಯಯೋಜನೆ ರೂಪಿಸಲಾಯಿತು. ನರೇಗಾ ಮಾಜಿ ಓಂಬಡ್ಸ್‌ಮೆನ್ ಶೀನ ಶೆಟ್ಟಿ, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು. ಸುಗ್ರಾಮ ಪಧಾಧಿಕಾರಿಗಳಾದ ಪ್ರಭಾ, ಸೌಮ್ಯ, ರಂಜಿನಿ ಹೆಗ್ಡೆ, ಹೇಮಾ, ವಿಮಲ ದೇವಾಡಿಗ, ಸುಮಂಗಳ, ಹೇಮಾ ಬಾಸ್ರಿ , ಶೋಭಾ, ಜೂಲಿಯೆಟ್ ವೀರಾ ಡಿಸೋಜ ಮೊದಲಾದವರು ಜಿಲ್ಲಾಧಿಕಾರಿ ಹಾಗೂ ಜಿಪಂ ಕಾರ್ಯ ನಿರ್ವಹಣಾಧಿಕಾರಿ ಕಚೇರಿಗೆ ತೆರಳಿ ಅಧಿನಿಯಮದ ಶೀಘ್ರ ಅನುಷ್ಟಾನಕ್ಕೆ ಒತ್ತಾಯಿಸಿ ಮನವಿಗಳನ್ನು ಸಲ್ಲಿಸಿದರು.