ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಸೆಮಿಫೈನಲ್‌ಗೆ ಪ್ರವೇಶಿಸಿದ ನವೀನ್, ಅಂಕಿತ್

ಬ್ಯಾಂಕಾಕ್, ಜು.3: ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೋಮವಾರ ಭಾರತ ಮಿಶ್ರ ಫಲಿತಾಂಶ ಪಡೆದಿದೆ. ನವೀನ್ ಬೂರಾ(69 ಕೆಜಿ) ಹಾಗೂ ಅಂಕಿತ್(60ಕೆಜಿ)ಸೆಮಿ ಫೈನಲ್‌ಗೆ ಪ್ರವೇಶಿಸುವುದರೊಂದಿಗೆ ಪದಕವನ್ನು ದೃಢಪಡಿಸಿದ್ದಾರೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನವೀನ್ ಚೀನಾದ ಹ್ವಾಂಗ್ ರೂ ಅವರನ್ನು ಸರ್ವಸಮ್ಮತ ತೀರ್ಪಿನಲ್ಲಿ ಮಣಿಸಿದರೆ, ಅಂಕಿತ್ ಕಿರ್ಗಿಸ್ತಾನದ ಆದಿಲ್ ಎಗೆನ್‌ಬೆರ್ಡಿ ಅವರನ್ನು ಸೋಲಿಸಿದರು.
ಸಂದೀಪ್ ಕುಮಾರ್(52ಕೆಜಿ) ಹಾಗೂ ಆಶೀಷ್(81ಕೆಜಿ) ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಎಡವಿದ್ದಾರೆ.
ಸಂದೀಪ್ ಜಪಾನ್‌ನ ರಿಟಾರೊ ನಗಾಕಿ ವಿರುದ್ಧ ಸೋಲುಂಡಿದ್ದಾರೆ. ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಆಶೀಷ್ ಉಜ್ಬೇಕಿಸ್ತಾನದ ಎರ್ಗಾಶೇವ್ ತೈಮುರ್‌ರನ್ನು ಎದುರಿಸಲಿದ್ದಾರೆ.
ಇದೀಗ ಭಾರತದ ಮೂವರು ಬಾಕ್ಸರ್‌ಗಳು ಸೆಮಿಫೈನಲ್‌ಗೆ ತಲುಪಿದ್ದಾರೆ. ಹರ್ಶಪ್ರೀತ್ ಸಹ್ರವತ್(+91ಕೆಜಿ) ಸೆಮಿಫೈನಲ್‌ಗೆ ನೇರ ಪ್ರವೇಶ ಪಡೆದಿದ್ದಾರೆ.
ಟೂರ್ನಿಯಲ್ಲಿ 23 ದೇಶಗಳ 120 ಬಾಕ್ಸರ್‌ಗಳು ಸ್ಪರ್ಧಿಸುತ್ತಿದ್ದಾರೆ.
Next Story





