ಕಾನ್ಫಡರೇಶನ್ ಕಪ್: ಜರ್ಮನಿ ಚಾಂಪಿಯನ್
ಸೈಂಟ್ ಪೀಟರ್ಸ್‌ಬರ್ಗ್(ರಶ್ಯ): ಕೋಪಾ ಅಮೆರಿಕ ಚಾಂಪಿಯನ್ ಚಿಲಿ ತಂಡವನ್ನು 1-0 ಅಂತರದಿಂದ ಸೋಲಿಸಿದ ವಿಶ್ವ ಚಾಂಪಿಯನ್ ಜರ್ಮನಿ ಫುಟ್ಬಾಲ್ ತಂಡ ಮೊದಲ ಬಾರಿ ಕಾನ್ಫಡರೇಶನ್ ಕಪ್‌ನ್ನು ಮುಡಿಗೇರಿಸಿಕೊಂಡಿದೆ. ರವಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 20ನೆ ನಿಮಿಷದಲ್ಲಿ ಎದುರಾಳಿ ತಂಡದ ಮಾರ್ಸೆಲೊ ಡಿಯಾಝ್ ಎಸೆಗಿದ ತಪ್ಪಿನ ಲಾಭ ಪಡೆದ ಲಾರ್ಸ್ ಸ್ಟಿಂಡಲ್ ಗೋಲು ಬಾರಿಸಿದರು. ಸ್ಟಿಂಡಲ್‌ರ ಏಕೈಕ ಗೋಲಿನ ಸಹಾಯದಿಂದ ಜರ್ಮನಿ ತಂಡ ದಕ್ಷಿಣ ಅಮೆರಿಕದ ತಂಡ ಚಿಲಿಯನ್ನ್ನು ಮಣಿಸಿತು.
Next Story





