ಪ್ರೊ.ಕನೈ ಕುನ್ಹಿರಾಮನ್‌ಗೆ ನಂಜುಂಡರಾವ್ ಪ್ರಶಸ್ತಿ
ಬೆಂಗಳೂರು, ಜು.4: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಂಸ್ಥಾಪಕ ಕಾರ್ಯದರ್ಶಿ ಪ್ರೊ.ಎಂ.ಎಸ್.ನಂಜುಂಡರಾವ್‌ರವರ 85ನೆ ಹುಟ್ಟುಹಬ್ಬದ ಅಂಗವಾಗಿ ಜು.5ರಂದು ನಗರದ ಚಿತ್ರಕಲಾ ಪರಿಷತ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಲಾವಿದ ಪ್ರೊ.ಕನೈ ಕುನ್ಹಿರಾಮನ್‌ಗೆ ‘ಪ್ರೊ.ಎಂ.ಎಸ್.ನಂಜುಂಡರಾವ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪರಿಷತ್‌ನ ಅಧ್ಯಕ್ಷ ಬಿ.ಎಲ್.ಶಂಕರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಇದೇ ವೇಳೆ ಅಂತಾರಾಷ್ಟ್ರೀಯ ಕಲಾವಿದ ಡಾ.ಕೃಷ್ಣರೆಡ್ಡಿರವರ ಗ್ರಾಫಿಕ್ ಕಲಾ ಪ್ರದರ್ಶನವು ಜು.5ರಿಂದ 11ರವರೆಗೆ ನಡೆಯಲಿದೆ.
Next Story