ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಸಸ್ಯಗಳ ಮಾರಾಟ

ಮೂಡುಬಿದಿರೆ,ಜು.4 : ಕೋಟಿ ವೃಕ್ಷ ಅಭಿಯಾನದಂಗವಾಗಿ ಮೂಡುಬಿದಿರೆ ವಲಯ ಅರಣ್ಯಾಧಿಕಾರಿಗಳ ಕಛೇರಿಯ ನೇತೃತ್ವದಲ್ಲಿ ಹೊಸ್ಮಾರು ಘಟಕ ಮತ್ತು ಈದು ಗ್ರಾಮ ಪಂಚಾಯತ್‍ನ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸಸಿಗಳನ್ನು ಮಾರಾಟ ಮಾಡುವ ಕಾರ್ಯಕ್ರಮ "ಸಸ್ಯ ಸಂತೆ"ಯು ಪಂಚಾಯತ್‍ನ ಆವರಣದಲ್ಲಿ ನಡೆಯಿತು.
ವೃಕ್ಷಮಿತ್ರ ಪ್ರಶಸ್ತಿ ಪುರಷ್ಕೃತ ಮಹಮ್ಮದಾಲಿ ಅಬ್ಬಾಸ್ ಮತ್ತು ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಅವರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿದರು.
ಈದು ಗ್ರಾ.ಪಂಚಾಯತ್ ಅಧ್ಯಕ್ಷ ಪುರುಷೋತ್ತಮ್ ರಾವ್, ನೂರಳ್‍ಬೆಟ್ಟು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಎನ್ ವಿಜಯಕುಮಾರ್ ಜೈನ್, ಈದು ಸಮಿತಿಯ ಅಧ್ಯಕ್ಷ ರಾಜುಪೂಜಾರಿ, ಉಪವಲಯಾರಣ್ಯಾಧಿಕಾರಿ ಮಂಜುನಾಥ್ ಗಾಣಿಕ, ಪಿಡಿಓ ಷಣ್ಮುಖ, ಸಂಪನ್ಮೂಲ ವ್ಯಕ್ತಿ ಕೃಷ್ಣ ಕುಮಾರ್ ಎನ್.ಇ ಮತ್ತು ಅರಣ್ಯ ರಕ್ಷಕ ದೇವಿಪ್ರಸಾದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Next Story





