ಹೊಸ್ಮಾರಿನಲ್ಲಿ ವನಮಹೋತ್ಸವ, ಬೀಜದುಂಡೆ ಅಭಿಯಾನ

ಮೂಡುಬಿದಿರೆ,ಜು.4 : ನೀರಿಗಾಗಿ ಅರಣ್ಯ ಎಂಬ ಪರಿಕಲ್ಪನೆಯೊಂದಿಗೆ ಮೂಡುಬಿದಿರೆ ವಲಯ ಅರಣ್ಯ ಇಲಾಖೆ, ಈದು ಗ್ರಾಮ ಪಂಚಾಯತ್, ಸರಕಾರಿ ಪ್ರೌಢಶಾಲೆ ಹೊಸ್ಮಾರು ಮತ್ತು ಅದರ ಇಕೋಕ್ಲಬ್ ಹಾಗೂ ಈದು ಮತ್ತು ನೂರಳ್‌ಬೆಟ್ಟು ಗ್ರಾಮ ಅರಣ್ಯ ಸಮಿತಿ ಇವುಗಳ ಜಂಟಿ ಸಹಯೋಗದೊಂದಿಗೆ ಬೀಜದುಂಡೆ ಅಭಿಯಾನ, ವನಮಹೋತ್ಸವ ಮತ್ತು ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಕಾರ್ಯಕ್ರಮವು ಹೊಸ್ಮಾರು ಪ್ರೌಢಶಾಲೆಯಲ್ಲಿ ನಡೆಯಿತು. ವೃಕ್ಷಮಿತ್ರ ಪ್ರಶಸ್ತಿ ಪುರಷ್ಕೃತ ಮಹಮ್ಮದಾಲಿ ಅಬ್ಬಾಸ್ ಅವರು ಗಿಡಗಳನ್ನು ನೆಟ್ಟು, ಬೀಜದುಂಡೆಯನ್ನು ಅರಣ್ಯ ಪ್ರದೇಶದಲ್ಲಿ ಬೀಸಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಜಿ.ಪಂ ಸದಸ್ಯೆ ದಿವ್ಯಶ್ರೀ ಜಿ.ಅಮೀನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈದು ಗ್ರಾ.ಪಂಚಾಯತ್ ಅಧ್ಯಕ್ಷ ಪುರುಷೋತ್ತಮ್ ರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು. ತಾ.ಪಂ ಸದಸ್ಯೆ ಮಂಜುಳಾ, ಪಂಚಾಯತ್ ಉಪಾಧ್ಯಕ್ಷೆ ಪದ್ಮಪ್ರಿಯ ಜೈನ್, ವಲಯಾರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ನೂರಳ್‌ಬೆಟ್ಟು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಎನ್ ವಿಜಯಕುಮಾರ್ ಜೈನ್, ಈದು ಸಮಿತಿಯ ಅಧ್ಯಕ್ಷ ರಾಜುಪೂಜಾರಿ, ಪಿಡಿಓ ಷಣ್ಮುಖ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅರಣ್ಯ ರಕ್ಷಕ ದೇವಿಪ್ರಸಾದ್ ಉಪಸ್ಥಿತರಿದ್ದರು.
ಉಪವಲಯಾರಣ್ಯಾಧಿಕಾರಿ ಮಂಜುನಾಥ್ ಗಾಣಿಗ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಕೃಷ್ಣ ಕುಮಾರ್ ಎನ್.ಇ ಕಾರ್ಯಕ್ರಮ ನಿರೂಪಿಸಿದರು.







