ಆಳ್ವಾಸ್‍ನಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ
.jpg)
ಮೂಡುಬಿದಿರೆ,ಜು.4: ವೃತ್ತಿ ಬದುಕಿನಲ್ಲಿ ಸೇವೆಯ ಜೊತೆಗೆ ಶಿಸ್ತು, ಚಿಕಿತ್ಸಾ ಬದ್ಧತೆ, ರೋಗಿಗಳ ಸುರಕ್ಷತೆ, ತುರ್ತು ಸಂದರ್ಭಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಕೌಶಲ್ಯಗಳನ್ನು ವೈದ್ಯರೂ ಒಳಗೊಂಡಂತೆ ಆಸ್ಪತ್ರೆಯ ಪರಿಚಾರಕ ವರ್ಗ ಆಸಕ್ತಿಯಿಂದ ಕರ್ತವ್ಯ ನಿರ್ವಹಿಸಬೇಕು. ಆಸ್ಪತ್ರೆಯ ಪರಿಸರ ಸೌಲಭ್ಯಗಳು ರೋಗಿ ಮತ್ತು ಬಳಗಕ್ಕೆ ಸಹಕಾರಿಯಾಗುವಂತಿದ್ದರೆ ಆಸ್ಪತ್ರೆಯ ಜತೆಗಿನ ಸಂಬಂಧ ಗಾಢವಾಗಿ ಬೆಸೆದುಕೊಳ್ಳುತ್ತದೆ ಎಂದು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿನಯಚಂದ್ರ ಶೆಟ್ಟಿ ಹೇಳಿದರು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ವತಿಯಿಂದ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇರಳದ ಪಾಲಕ್ಕಾಡ್‍ನ ಅಹಲ್ಯಾ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸುರೇಖಾ ಪೈಕಾರ್ಯಕ್ರಮ ಉದ್ಘಾಟಿಸಿದರು. ವೈದ್ಯಕೀಯ ಅಧೀಕ್ಷಕಿ ಡಾ.ಝೆನಿಕಾ ಡಿ'ಸೋಜ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರವಿಪ್ರಸಾದ್ ಹೆಗ್ಡೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಾಯಕ ಆಡಳಿತಾಧಿಕಾರಿ ಜೋಬಿನ್ ಜೋಸೆಫ್ ಉಪಸ್ಥಿತರಿದ್ದರು.







