ವೈದ್ಯಕೀಯ ಶಿಕ್ಷಣದ ಶುಲ್ಕ ಏರಿಕೆಗೆ ವಿರೋಧ: ಮನವಿ

ಬೆಳ್ತಂಗಡಿ, ಜು. 4: ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2017 ವಿಧೇಯಕವನ್ನು ಯಾವುದೇ ಸಾರ್ವಜನಿಕ, ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳೊಂದಿಗೆ ಸಮಾಲೋಚಿಸದೆ ತರಾತುರಿಯಲ್ಲಿ ಜಾರಿಗೆ ತರುತ್ತಿರುವುದನ್ನು ಹಾಗೂ ರಾಜ್ಯ ಸರಕಾರವು ವೈದ್ಯಕೀಯ ಶಿಕ್ಷಣದ ಶುಲ್ಕ ಏರಿಕೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ಘಟಕ ತೀವ್ರವಾಗಿ ಖಂಡಿಸಿ, ಬೆಳ್ತಂಗಡಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಅದೇ ರೀತಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ವೃತ್ತಿಪರ ಕೋರ್ಸ್‌ಗಳ ಶುಲ್ಕ ಬಡ, ಪ್ರತಿಭಾವಂತ, ವಿದ್ಯಾರ್ಥಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ. ಪ್ರಸಕ್ತ ಸಾಲಿನಲ್ಲಿ ಶೇ.10 ವೈದ್ಯಕೀಯ ಹಾಗು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕವನ್ನು ಹೆಚ್ಚಿಸಿರುವುದು ರಾಜ್ಯ ಸರಕಾರದ ಕ್ರಮನ್ನು ಪರಿಷತ್ ತೀವ್ರವಾಗಿ ವಿರೋಧಿಸುತ್ತದೆ. ಕೇವಲ ಶುಲ್ಕ ಮಾತ್ರವಲ್ಲದೆ, ಸೀಟು ಹಂಚಿಕೆಯ ವಿಷಯದಲ್ಲೂ ಸಹ ಖಾಸಗಿ ಕಾಲೇಜುಗಳ ಲಾಬಿಗೆ ಮಣಿದಿರುವ ಸರಕಾರವು 65 ಸರಕಾರಿ, 35 ಖಾಸಗೀ ಸೀಟುಗಳಿದ್ದದ್ದು ಇಂದು 40 ಸರಕಾರಿ, 60 ಸರಕಾರಿ ಸೀಟುಗಳಾಗಿ ಮಾರ್ಪಟ್ಟಿವೆ. ಇದನ್ನು ವೀರೋಧಿಸಿರುವ ಪರಿಷತ್ ಹೆಚ್ಚಿಸಿರುವ ಶುಲ್ಕವನ್ನು ಕಡಿಮೆ ಮಾಡಬೇಕು ಇಲ್ಲವಾದಲ್ಲಿ ತೀವ್ರ ಹೋರಾಟ ಮಾಡುವುದಾಗಿ ತಿಳಿಸಿದೆ.
ಅ.ಭಾ.ವಿ.ಪ. ಪುತ್ತೂರು ಜಿಲ್ಲಾ ಸಂಚಾಲಕ ಪ್ರಜ್ವಲ್ ಶೆಟ್ಟಿ, ಬೆಳ್ತಂಗಡಿ ನಗರ ಕಾರ್ಯದರ್ಶಿ ತೀಕ್ಷಿತ್ ಕೆ. ದಿಡುಪೆ, ಉಜಿರೆ ನಗರ ಕಾರ್ಯದರ್ಶಿ ಆದಿತ್ಯ ರಾವ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.





