ಯೋಗ ದಿನಾಚರಣೆ: ಆಯುಷ್ ಸಚಿವಾಲಯ ಮಾಡಿದ ವೆಚ್ಚ ಎಷ್ಟು ಕೋಟಿ ಗೊತ್ತೇ?

ಹೊಸದಿಲ್ಲಿ, ಜು.4: ಕಳೆದ ಎರಡು ವರ್ಷಗಳಲ್ಲಿ ಆಯುಷ್ ಸಚಿವಾಲಯವು ಯೋಗ ದಿನಾಚರಣೆಯಂದು 34 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ ಎನ್ನುವುದು ಆರ್ ಟಿಐ ಕಾರ್ಯಕರ್ತರೊಬ್ಬರಿಗೆ ಸಚಿವಾಲಯ ನೀಡಿದ ಮಾಹಿತಿಯಿಂದ ಬಹಿರಂಗವಾಗಿದೆ.
2015 ಹಾಗೂ 2016ರಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆಯುಷ್ ಸಚಿವಾಲಯವು 34.50 ಕೋಟಿ ರೂ. ವೆಚ್ಚ ಮಾಡಿದೆ ಎಂದು ಆರ್ ಟಿಐ ಕಾರ್ಯಕರ್ತ ನೂತನ್ ಠಾಕೂರ್ ಅವರಿಗೆ ಸಚಿವಾಲಯ ನೀಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ. 2015ರಲ್ಲಿ 16.40 ಕೋಟಿ ರೂ. ಹಾಗೂ 2016ರಲ್ಲಿ 18.10 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಈ ವರ್ಷ ನಡೆದ ಯೋಗ ದಿನಾಚರಣೆಯ ಸಂದರ್ಭದ ವೆಚ್ಚವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಬನಮಾಲಿ ನಾಯ್ಕ್ ಹೇಳಿದ್ದಾರೆ.
Next Story





