ಜು.6ರಂದು ಉಚಿತ ನೇತ್ರ ಚಿಕಿತ್ಸಾ ಶಿಬಿರ

ಮಂಗಳೂರು, ಜು.4: ಸಾರ್ವಜನಿಕರಿಗೆ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ ಹಾಗೂ ರೆಟಿನಾ ಪರೀಕ್ಷೆಗಳನ್ನೊಳಗೊಂಡ ನೇತ್ರ ಚಿಕಿತ್ಸಾ ಶಿಬಿರವನ್ನು ಮಂಗಳೂರಿನ ಡೆಲ್ಟಾ ಕಣ್ಣಿನ ಆಸ್ಪತ್ರೆಯು ಹಮ್ಮಿಕೊಂಡಿದೆ.
ಜು.6ರಂದು ಬೆಳಗ್ಗೆ 10ರಿಂದ ಸಂಜೆ 4:30ರವರೆಗೆ ಮಂಗಳೂರಿನ ಬೆಂದೂರ್‍ವೆಲ್ ಮುಖ್ಯ ರಸ್ತೆಯ ಹಳೆಯ ವಾಸನ್ ಕಣ್ಣಿನ ಆಸ್ಪತ್ರೆ ಕಟ್ಟಡದಲ್ಲಿರುವ ಡೆಲ್ಟಾ ಕಣ್ಣಿನ ಆಸ್ಪತ್ರೆಯಲ್ಲಿ ಈ ಶಿಬಿರ ನಡೆಯಲಿದ್ದು, ನುರಿತ ನೇತ್ರತಜ್ಞರು ಉಚಿತ ಭೇಟಿಗಾಗಿ ಲಭ್ಯರಿರುವರು ಎಂದು ಪ್ರಕಟನೆ ತಿಳಿಸಿದೆ.
Next Story





