ಪ್ರಾಥಮಿಕ ವಿದ್ಯಾರ್ಥಿಗಳನ್ನು ದಂಡಿಸಬೇಡಿ: ಮೋಕ್ಷಾನಂದ ಸ್ವಾಮೀಜಿ

ಕಾಪು, ಜು.4: ಪ್ರಾಥಮಿಕ ಶಾಲಾ ಹಂತವು ಪ್ರತಿಯೊಬ್ಬರ ಬದುಕಿನ ಅಡಿ ಗಲ್ಲಾಗಿರುತ್ತದೆ. ತಿಳುವಳಿಕೆಯ ಕೊರತೆಯಿಂದ ಅವರಲ್ಲಿ ತಾಮಸ ಗುಣವಿರು ತ್ತದೆ. ಈ ಹಂತದಲ್ಲಿ ಶಿಕ್ಷಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ದಂಡಿಸದೆ ಅಕ್ಕರೆ ಪ್ರೀತಿ ತೋರಬೇಕು ಎಂದು ಬಂಟಕಲ್ಲು ಅಸರಿಕಟ್ಟೆಯ ಜಯಸೃತಿ ಧಾಮದ ಶ್ರೀಮೋಕ್ಷಾನಂದ ಸ್ವಾಮೀಜಿ ಹೇಳಿದ್ದಾರೆ.
ಕೋಡು ಶ್ರೀದುರ್ಗಾಂಬಿಕಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ದಾನಿಗಳು ನೀಡಿದ ಸಮವಸ್ತ್ರ ಪುಸ್ತಕ ಕೊಡೆ ಮತ್ತು ಬ್ಯಾಗ್ ವಿತರಣಾ ಸಮಾರಂಭದಲ್ಲಿ ಇತ್ತೀಚೆಗೆ ಅವರು ಮಾತ ನಾಡುತಿದ್ದರು.
ಮುಖ್ಯ ಅತಿಥಿಯಾಗಿ ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ. ಭಾಸ್ಕರ್ ಶೆಟ್ಟಿ ಮಾತನಾಡಿದರು. ಅಧ್ಯಕ್ಷತೆಯನ್ನು ಶಿರ್ವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಸುಬ್ಬಯ್ಯ ಹೆಗ್ಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ 85 ವಿದ್ಯಾರ್ಥಿಗಳಿಗೆ ಸಮವಸ್ತ್ರ ಪುಸ್ತಕ, ಬ್ಯಾಗ್ ಮತ್ತು ಕೊಡೆಗಳನ್ನು ವಿತರಿಸಲಾಯಿತು.
ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಮನೋಹರ ಶೆಟ್ಟಿ, ಉಪಾಧ್ಯಕ್ಷ ಕೆ. ಆರ್.ಪಾಟ್ಕರ್, ವಳದೂರು ವೆಲೇರ್ ಅಸೋಸಿಯೇಶನ್ ಅಧ್ಯಕ್ಷ ಲೀಲಾಧರ ಶೆಟ್ಟಿ, ಮೇರಿ ಅರಾಹ್ನ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸದಾನಂದ ಶೆಟ್ಟಿ, ವಸಂತ ಪೂಜಾರಿ, ಶಾಲಾ ಮುಖ್ಯೋಪಾಧ್ಯಾಯಿನಿ ಸುಮತಿ ಉಪಸ್ಥಿತರಿದ್ದರು.
ನಿವೃತ್ತ ಮುಖ್ಯೋಪಾದ್ಯಾಯ ಸಂತೋಷ್ ಕುಮಾರ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಧೀರಜ್ ಶೆಟ್ಟಿ ಸ್ವಾಗತಿಸಿದರು. ಪ್ರಸಾದ್ ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ಸುಕೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







