ಉಪನ್ಯಾಸಕಿಯ ಪರ್ಸ್ ಕಳವು : ಆರು ತಿಂಗಳ ಬಳಿಕ ಆರೋಪಿ ಸೆರೆ

ಮೂಡುಬಿದಿರೆ,ಜು.4:ಮೂಡುಬಿದಿರೆಯ ಉಪನ್ಯಾಸಕಿಯೊಬ್ಬರ ಪರ್ಸ್ ಕಳವುಗೈದ ಆರೋಪಿ ಆರು ತಿಂಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯನ್ನು ಕಾರ್ಕಳ ಪತ್ತೊಂಜಿಕಟ್ಟೆಯ ಕಾಸಿಂ(29)ಎಂದು ಗುರುತಿಸಲಾಗಿದೆ.
ಆಳ್ವಾಸ್ ಕಾಲೇಜಿನ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ವಿಭಾಗದ ಉಪನ್ಯಾಸಕಿಯ ನಗದು ಹಾಗೂ ಚಿನ್ನದ ಉಂಗುರವಿದ್ದ ಪರ್ಸ್ ಆರು ತಿಂಗಳ ಹಿಂದೆ ಕಳವಾಗಿತ್ತು. ಉಪನ್ಯಾಸಕಿ ತನ್ನ ಪರ್ಸನ್ನು ತರಗತಿಗೆ ತೆರಳುವ ಸಂದರ್ಭ ಕಚೇರಿಯಲ್ಲಿ ಬಿಟ್ಟು ಹೋಗಿದ್ದನ್ನು ಗಮನಿಸಿದ್ದ ಆರೋಪಿ ಅದನ್ನು ಎಗರಿಸಿದ್ದ. ಈ ಸಂದರ್ಭ ಘಟನೆ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.
ಘಟನೆ ನಡೆದು ಆರು ತಿಂಗಳ ಬಳಿಕ ಮಂಗಳವಾರ ಅದೇ ಕಚೇರಿಗೆ ಆರೋಪಿ ಖಾಸಿಂ ಭೇಟಿ ಕೊಟ್ಟದ್ದನ್ನು ಗಮನಿಸಿದ ಉಪನ್ಯಾಸಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಕಳವಾದ ಸ್ವತ್ತನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Next Story





