ಹೆಡ್ ಕಾನ್‌ಸ್ಟೆಬಲ್ ನಾಪತ್ತೆ

ಮಂಗಳೂರು, ಜು. 4: ನಗರದ ಸಿಎಆರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್‌ಸ್ಟೆಬಲ್ ಪ್ರಸ್ತುತ ಮಂಜೇಶ್ವರದ ನಿವಾಸಿ ಚೌಕಪ್ಪ ಎಂಬವರ ಪುತ್ರ ಮೋಹನ್ ಕುಮಾರ್ (35) ಎಂಬವರು ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜೂ.6ರಂದು ಬೆಳಗ್ಗೆ 6 ಗಂಟೆಗೆ ಮಂಜೇಶ್ವರದ ಮನೆಯಿಂದ ಕರ್ತವ್ಯಕ್ಕೆಂದು ಮಂಗಳೂರಿಗೆ ಹೊರಟಿದ್ದ ಅವರು ಕೆಲಸಕ್ಕೂ ಹಾಜರಾಗದೆ ಮನೆಗೂ ಹಿಂದಿರುಗದೆ ಕಾಣೆಯಾಗಿದ್ದಾರೆ ಎಂದು ದೂರು ದಾಖಲಾಗಿದೆ.
5 ಅಡಿ 8 ಇಂಚು, ಸಪೂರ ಶರೀರ, ಎಣ್ಣೆ ಕಪ್ಪ ಮೈಬಣ್ಣ ಹೊಂದಿರುವ ಮೋಹನ್ ಕುಮಾರ್ ತುಳು, ಕನ್ನಡ, ಮಲಯಾಳಂ ಭಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿಕ್ಕಿದ್ದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0824-2220518 ಅಥವಾ ನಗರ ನಿಯಂತ್ರಣ ಕೊಠಡಿ 0824-2220400ಗೆ ಸಂಪರ್ಕಿಸುವಂತೆ ಪ್ರಕಟೆಯಲ್ಲಿ ಕೋರಲಾಗಿದೆ.
Next Story





