ಮನೆಗೆ ನುಗ್ಗಿ ಕಳವು
ಕಾಪು, ಜು.4: ಮಟ್ಟು ಗ್ರಾಮದ ಅಂಬಾಡಿ ಭಜನಾ ಮಂದಿರ ಬಳಿಯ ಮನೆಗೆ ಜು. 2ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ವನಿತಾ ಎಂಬವರು ತನ್ನ ಮನೆಗೆ ಬೀಗ ಹಾಕಿ ತಾಯಿ ಮನೆಗೆ ಮಲಗಲು ಮಗಳೊಂದಿಗೆ ಹೋಗಿದ್ದು, ಈ ವೇಳೆ ಮನೆಯ ಹಿಂದಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಬೆಡ್‌ರೂಂನಲ್ಲಿ ಕಪಾಟು ಒಡೆದು 20,000ರೂ. ನಗದು ಕಳವು ಮಾಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





