ಹೇಯ ಅಪರಾಧ ಎಸಗಿದವರು ಚುನಾವಣೆಗೆ ಸ್ಪರ್ಧಿಸುವುದನ್ನು ಅನರ್ಹಗೊಳಿಸಿ: ಮುಖ್ಯ ಚುನಾವಣಾ ಆಯುಕ್ತ

ಹೊಸದಿಲ್ಲಿ. ಜು. 4: ಹೇಯ ಅಪರಾಧ ಹಾಗೂ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರನ್ನು ಅನರ್ಹಗೊಳಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ
ಪಾರದರ್ಶಕತೆ ಹಾಗೂ ಮಕ್ತತೆಯಿಂದ ಚುನಾವಣೆ ನಡೆಸಬೇಕಿರುವುದು ನಮಗೆ ಈಗಿರುವ ಸವಾಲು. ಆದುದರಿಂದ ಹೇಯ ಅಪರಾಧಗಳಲ್ಲಿ ಪಾಲ್ಗೊಂಡವರನ್ನು ಚುನಾವಣೆಯಿಂದ ದೂರವಿರಿಸಬೇಕು.ಕೊಲೆ, ಅತ್ಯಾಚಾರ, ಅಪಹರಣ, ಮೊದಲಾದ ಹೇಯ ಅಪರಾಧಗಳಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಆರೋಪ ಪಟ್ಟಿ ದಾಖಲಾದವರು ಹಾಗೂ ಐದು ವರ್ಷ ಕಾರಾಗೃಹ ಶಿಕ್ಷೆಗೆ ಒಳಗಾಗುವವರನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶ ನೀಡಬಾರದು ಎಂದು ನಾವು ಶಿಫಾರಸು ಮಾಡಿದ್ದೇವೆ ಎಂದು ಮುಖ್ಯ ಚುನಾವಣಾ ಆಯುಕ್ತ ನಾಸಿಮ್ ಜೈದಿ ಹೇಳಿದ್ದಾರೆ.
ಈ ವಿಷಯದ ಕುರಿತು ಕಾನೂನು ಆಯೋಗಕ್ಕೆ ಪ್ರತ್ಯೇಕ ವರದಿ ಸಲ್ಲಿಸಲಾಗಿದೆ. ಆದ್ಯತೆ ಆಧಾರದ ಮೇಲೆ ಅನುಷ್ಠಾನಕ್ಕೆ ತರಲು ಇದು ಸಕಾಲ ಎಂದು ಜೈದಿ ಹೇಳಿದ್ದಾರೆ.
Next Story





