ಡಾರ್ಜಿಲಿಂಗ್: ಬಂದ್ 20ನೇ ದಿನಕ್ಕೆ

ಡಾರ್ಜಿಲಿಂಗ್, ಜು. 4: ಪ್ರತ್ಯೇಕ ಗೂರ್ಖಾಲ್ಯಾಂಡ್‌ಗಾಗಿ ನಡೆಯುತ್ತಿರುವ ಪ್ರತಿಭಟನೆ 20ನೇ ದಿನಕ್ಕೆ ತಲುಪಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ. ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿ ಈಗ 18 ದಿನಗಳಾಗಿವೆ. ಪರಿಸ್ಥಿತಿ ತಿಳಿಗೊಳ್ಳದ ಹಿನ್ನೆಲೆಯಲ್ಲಿ ಇನ್ನೂ ಏಳು ದಿನಗಳ ಕಾಲ ವಿಸ್ತರಿಸಲಾಗಿದೆ. ಪ್ರತ್ಯೆಕ ಗೂರ್ಖಾಲ್ಯಾಂಡ್ ರಚನೆಗೆ ಆಗ್ರಹಿಸಿ ಗೂರ್ಖಾ ಜನಮುಕ್ತಿ ಮೋರ್ಚಾ ಡಾರ್ಜಿಲಿಂಗ್‌ನ ವಿವಿಧ ಭಾಗಗಳಲ್ಲಿ ರ್ಯಾಲಿಗಳನ್ನು ನಡೆಸಿದೆ. ಗೂರ್ಖಾಲ್ಯಾಂಡ್ ಮಾತುಕತೆಯಲ್ಲಿ ಕೇಂದ್ರ ಪ್ರಮುಖ ಪಾತ್ರವಹಿಸಬೇಕು ಎಂದು ಗೂರ್ಖಾ ಜನಮುಕ್ತಿ ಮೋರ್ಚಾ ಆಗ್ರಹಿಸಿದೆ.
Next Story





