ಮೊದಲ ಸುತ್ತಿನಲ್ಲೇ ವಾವ್ರಿಂಕಗೆ ಆಘಾತಕಾರಿ ಸೋಲು

ವಿಂಬಲ್ಡನ್, ಜು.4: ಸ್ವಿಸ್‌ನ ಮೂರು ಬಾರಿಯ ಗ್ರಾನ್‌ಸ್ಲಾಮ್ ಪ್ರಶಸ್ತಿ ವಿಜೇತ ಸ್ಟಾನ್ ವಾವ್ರಿಂಕ ವಿಂಬಲ್ಡನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲನುಭವಿಸಿದ್ದಾರೆ.
ಅನುಭವಿ ಆಟಗಾರ ವಾವ್ರಿಂಕ ಚೊಚ್ಚಲ ವಿಂಬಲ್ಡನ್ ಟೂರ್ನಿ ಆಡಿದ ರಶ್ಯದ ಡೆನಿಲ್ ಮೆಡ್ವೆಡೇವ್ ವಿರುದ್ಧ 6-4, 3-6, 6-4, 6-1 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.
21ರ ಹರೆಯದ ಮೆಡ್ವೆಡೇವ್ ಮೂರನೆ ಗ್ರಾನ್‌ಸ್ಲಾಮ್ ಟೂರ್ನಿಯನ್ನು ಆಡುತ್ತಿದ್ದಾರೆ. 2 ಗಂಟೆ ಹಾಗೂ 12 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ ನಂ.3ನೆ ಆಟಗಾರ ವಾವ್ರಿಂಕ ವಿರುದ್ಧ ಸ್ಮರಣೀಯ ಗೆಲುವು ದಾಖಲಿಸಿದ್ದಾರೆ.
ನನಗೆ ಈ ಕ್ಷಣವನ್ನು ವರ್ಣಿಸಲು ಶಬ್ದಗಳೇ ಸಿಗುತ್ತಿಲ್ಲ. ಈ ನೆನಪು ಸದಾ ಕಾಲ ಉಳಿಯಲಿದೆ ಎಂದು ಸುದ್ದಿಗಾರರಿಗೆ ಮೆಡ್ವೆಡೇವ್ ತಿಳಿಸಿದ್ದಾರೆ.
ಕಳೆದ ತಿಂಗಳು ನಡೆದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ವಾವ್ರಿಂಕ ಸೋಮವಾರದ ಪಂದ್ಯದಲ್ಲಿ ಲಯ ಕಂಡುಕೊಳ್ಳಲು ವಿಫಲರಾದರು. ಅವರನ್ನು ಮಂಡಿನೋವು ಸತತವಾಗಿ ಕಾಡುತ್ತಿತ್ತು.
ವಿಂಬಲ್ಡನ್ ಟೂರ್ನಿಯಲ್ಲಿ ವಾವ್ರಿಂಕ ಸಾಧನೆ ಆಶಾದಾಯಕವಾಗಿಲ್ಲ. ಈತನಕ ಅವರಿಗೆ ಕ್ವಾರ್ಟರ್ ಫೈನಲ್ ದಾಟಲು ಸಾಧ್ಯವಾಗಿಲ್ಲ







