ಹವಳದ ಮಾಂಗಲ್ಯ ಸರಕ್ಕೆ ಮಾತು ಬರುತ್ತೆ, ಗಂಡ ಸಾಯುತ್ತಾನೆ?
ವದಂತಿಗೆ ಭಯಭೀತರಾದ ಮಹಿಳೆಯರಿಂದ ಹವಳ ಪುಡಿಪುಡಿ

ಬೆಂಗಳೂರು, ಜು.5: ಮಹಿಳೆಯರು ಧರಿಸಿದ ಹವಳದ ಮಾಂಗಲ್ಯ ಸರ ತೆಗೆಯದಿದ್ದರೆ ಪತಿಯ ಸಾವು ಖಚಿತ ಎಂಬ ವದಂತಿ ಹರಡಿದ್ದು, ಇದರಿಂದ ಭಯಭೀತರಾದ ರಾಯಚೂರಿನ ಸಿಂಧನೂರಿನ ಮಹಿಳೆಯರು ಮಾಂಗಲ್ಯ ಸರದಿಂದ ಹವಳವನ್ನು ಬೇರ್ಪಡಿಸಿ ಕಲ್ಲಿನಿಂದ ಕುಟ್ಟಿ ಪುಡಿಪುಡಿ ಮಾಡಿದ್ದಾರೆ.
ಮೈಸೂರು, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ಮಾಂಗಲ್ಯದ ಹವಳದ ಸರಕ್ಕೆ ಮಾತು ಬರುತ್ತದೆ. ಅದು ಮಾತಾಡಿದರೆ ಪತಿ ಸತ್ತೇ ಹೋಗುತ್ತಾನೆ ಎಂಬ ಮತ್ತೊಂದು ವಿಚಿತ್ರ ವದಂತಿ ಹರಡಿದ್ದು, ಅಲ್ಲಿಯೂ ಕೂಡ ಮಹಿಳೆಯರು ಮಾಂಗಲ್ಯದಲ್ಲಿರುವ ಹವಳವನ್ನು ತೆಗೆದು ಕಲ್ಲಿನಿಂದ ಪುಡಿಪುಡಿ ಮಾಡಿದ್ದಾರೆ.
ಈ ವದಂತಿಯ ಮೂಲ ಯಾವುದೆಂದು ಇನ್ನೂ ಗೊತ್ತಾಗಿಲ್ಲ.
Next Story





