ಟೊಮೆಟೊ ಕೆಜಿಗೆ 120 ರೂ.

ಅಹ್ಮದಾಬಾದ್, ಜು.5: ಈ ವರ್ಷಾರಂಭದಲ್ಲಿ ರೈತರಿಗೆ ಕೈಕೊಟ್ಟಿದ್ದ ಟೊಮೆಟೊ ಇದೀಗ ಮಧ್ಯಮ ವರ್ಗದ ಜನರಿಗೆ ಕೈಗೆಟುಕುತ್ತಿಲ್ಲ. ಅಹ್ಮದಾಬಾದ್‌ನ ಜಮಾಲ್‌ಪುರ ಎಪಿಎಂಸಿಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊವನ್ನು ಪ್ರತಿ ಕೆಜಿಗೆ 120 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮಂಗಳವಾರ 56 ಕೆಜಿ ಇದ್ದ ಟೊಮೆಟೊ ಬೆಲೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ದಿಢೀರ್ ಏರಿಕೆ ಕಂಡಿದೆ.
ಇತರ ತರಕಾರಿಗಳ ದರವೂ ಪ್ರತಿ ಕೆಜಿಗೆ 100 ರೂ. ತಲುಪಿದೆ. ನಗರದಲ್ಲಿ ಭಾರೀ ಮಳೆ ಬಿದ್ದಿರುವ ಕಾರಣ ತರಕಾರಿಗಳ ಬೆಲೆ ಗಗನಕ್ಕೆೇರಿದೆ. ಹೆಚ್ಚು ಮಳೆ ಸುರಿದ ರಾಜ್ಯಗಳಲ್ಲಿ ತರಕಾರಿಯ ಬೆಲೆ ಏರಿಕೆಯಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ದೀಪಕ್ ಪಟೇಲ್ ಹೇಳಿದ್ದಾರೆ.
Next Story





