ಅಪರಿಚಿತ ಮಹಿಳೆ ಸಾವು
ಮೂಡಿಗೆರೆ, ಜು.5: ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಹೆಗರವಳ್ಳಿ ರಸ್ತೆ ಬದಿಯಲ್ಲಿ ಮಳೆಯಲ್ಲಿ ನೆನೆಯುತ್ತಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಹಿಳೆಯೋರ್ವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಗೋಣಿಬೀಡು ಗ್ರಾಮದ ಕಿರಣ್ ಎಂಬವರು ತನ್ನ ತೋಟಕ್ಕೆ ಬರುವ ಜನರನ್ನು ಬಿಟ್ಟು ಬರುವಾಗ ಹೆಗ್ಗರವಳ್ಳಿ ರಸ್ತೆ ಬದಿಯಲ್ಲಿ ಮಳೆಯಲ್ಲಿ ನೆನೆಯುತ್ತಾ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಬಿದ್ದಿದ್ದನ್ನು ಗಮನಿಸಿದಾಗ ಮಹಿಳೆಯ ಮೈ ಬಿಸಿ ಮತ್ತು ಉಸಿರಾಡುತ್ತಿರುವುದನ್ನು ಕಂಡುಬಂದಿತು. ಅವರು 108 ಆಂಬುಲೆನ್ಸ್‌ಗೆ ಫೋನ್ ಮಾಡಿ ಮೂಡಿಗೆರೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ನಂತರ ಮೂಡಿಗೆರೆ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ.
ಅಪರಿಚಿತ ಮಹಿಳೆಗೆ ಸುಮಾರು 65 ವರ್ಷ ಎಂದು ಅಂದಾಜಿಸಲಾಗಿದೆ. ಚಪ್ಟಟೆ ಮುಖ, ಎಣ್ಣೆಗೆಂಪು, ಎತ್ತರ 5ಅಡಿ, ಕಪ್ಪುಬಿಳಿ ಮಿಶ್ರಿತ ತಲೆಕೂದಲು, ಗಲ್ಲದಲ್ಲಿ ಕಜ್ಜಿ ಗುರುತು, ಬಲ ಕಣ್ಣಿನ ಬಳಿ 5 ಚುಕ್ಕಿಗಳಿರುವ ಗುರುತುಗಳಿವೆ. ಸ್ವತ್ತುಗಳು: ಎರಡು ಕೈಗಳಲ್ಲಿ ಬಿಳಿ ಹಸಿರು ಗಾಜಿನ ಬಳೆಗಳು, ನೇರಳೆ ಕಲ್ಲರ್ ಬ್ಲೌಸ್, ಕೊರಳಿನಲ್ಲಿ ಬೆಳ್ಳಿಯಂತೆ ಕಾಣುವ ಸರ, ಒಂದು ಕಿವಿ ಓಲೆ ತಿರುವ ಕಟ್ಟಾಗಿರುತ್ತದೆ ಎಂದು ಗೋಣಿಬೀಡು ಪೊಲೀಸರು ಮಾಹಿತಿ ನೀಡಿದ್ದಾರೆ.







