ಆರ್.ಎಸ್.ಎಸ್. ಕಾರ್ಯಕರ್ತನ ಮೇಲಿನ ಹಲ್ಲೆ ಖಂಡನೀಯ: ಬಿಜೆಪಿ
ಮಂಗಳೂರು, ಜು.5: ಆರ್.ಎಸ್.ಎಸ್. ಕಾರ್ಯಕರ್ತ, ಅಮಾಯಕ ಶರತ್‌ನ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸುವುದಾಗಿ ಭಾರತೀಯ ಜನತಾ ಪಕ್ಷ ತಿಳಿಸಿದೆ.
ಪ್ರಕಟನೆಯಲ್ಲಿ ತೀವ್ರ ಖಂಡನೆ ವ್ಯಕ್ತಪಡಿಸಿರುವ ಬಿಜೆಪಿ, ದ.ಕ ಜಿಲ್ಲೆಯ ಮತೀಯ ಶಕ್ತಿಗಳ ದುಷ್ಕರ್ತ್ಯದ ಪರಿಣಾಮವಾಗಿ ಈ ಕೃತ್ಯ ನಡೆದಿದ್ದು, ರಾಜ್ಯವನ್ನು ಆಳುವ ಕಾಂಗ್ರೆಸ್ ಪಕ್ಷದ ನೇರ ಹೊಣೆಗಾರಿಕೆಯಿಂದ ಇಂತಹ ಹಲ್ಲೆ ಕೃತ್ಯಗಳು ಬಹಳ ಸಮಯದಿಂದ ರಾಜಾರೋಷವಾಗಿ ನಡೆಯುತ್ತಿವೆ. ದ.ಕ. ಜಿಲ್ಲೆಯಲ್ಲಿ ಅಶಾಂತಿ ನೆಲೆಸಿದ್ದು, ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸದಿರಲು ಕಾಂಗ್ರೆಸ್ ಸರಕಾರದ ಮಧ್ಯೆ ಪ್ರವೇಶವೇ ಮುಖ್ಯ ಕಾರಣ ಎಂದು ಜನರು ಭಾವಿಸುವಂತಾಗಿದೆ.
ಈ ಕೃತ್ಯದ ಆರೋಪಿಗಳನ್ನು ಕೂಡಲೇ ಬಂಧಿಸಿ ಇದರ ಹಿಂದೆ ಇರುವ ದುಷ್ಟ ಶಕ್ತಿಗಳನ್ನು ಇಲಾಖೆ ತಕ್ಷಣವೇ ಪತ್ತೆ ಹಚ್ಚಿ ಸರಿಯಾದ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಪ್ರಕಟನೆಯಲ್ಲಿ ಆಗ್ರಹಿಸಲಾಗಿದೆ.
Next Story





