ಜು.10: ಜನಾಗ್ರಹ ಸಮಾವೇಶ
ಮಂಗಳೂರು, ಜು.5: ಜಾನುವಾರು ಮಾರಾಟ ನಿಯಂತ್ರಣ ನಿಯಮಗಳನ್ನು ಕೈಬಿಡಲು ಆಗ್ರಹಿಸಿ ಹಾಗೂ ದ.ಕ.ಜಿಲ್ಲೆಯ ಕೋಮು ಪ್ರಚೋದಕ ಶಕ್ತಿಗಳನ್ನು ಬಂಧಿಸಲು ಒತ್ತಾಯಿಸಿ ‘ದಲಿತ, ರೈತ, ಕಾರ್ಮಿಕರ ಜನಾಗ್ರಹ ಸಮಾವೇಶ -ಕೋಮುವಾದದ ವಿರೋಧಿ ಸೌಹಾರ್ದ ಸಮಾವೇಶ’ವು ಜು.10ರಂದು ಬೆಳಗ್ಗೆ 10ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ.
ಕಾರ್ಮಿಕ ರಂಗಕ್ಕೆ ಮಾರಕವಾಗುವ ಹಾಗೂ ಹೈನುಗಾರಿಕೆಗೆ ತಡೆ ಒಡ್ಡುವ ನಿಯಮಗಳನ್ನು ರದ್ದುಗೊಳಿಸಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಹಿಂಸೆಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಚೋದನಾಕಾರಿ ಭಾಷಣ ಮಾಡುತ್ತಿರುವ ಧಾರ್ಮಿಕ ನಾಯಕರೆಂದು ಕರೆಸಿಕೊಳ್ಳುತ್ತಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿ ಜಾತ್ಯತೀತ, ಪ್ರಜಾಸತ್ತಾತ್ಮಕ ಪಕ್ಷಗಳು ಹಾಗೂ ಸಂಘಟನೆಗಳು ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಸಮಾವೇಶವನ್ನು ಖ್ಯಾತ ಚಿಂತಕ ರಾಜೇಂದ್ರ ಚೆನ್ನಿ ಉದ್ಘಾಟಿಸಲಿದ್ದು, ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ, ಸಿಪಿಐ ಕೇಂದ್ರ ಸಮಿತಿ ಸದಸ್ಯ ಡಾ.ಸಿದ್ಧನ ಗೌಡ ಪಾಟೀಲ್, ರಾಜ್ಯ ಜನತಾ ದಳ ಪ್ರಧಾನ ಕಾರ್ಯದರ್ಶಿ ಭೋಜೇಗೌಡ, ದಸಂಸ-ಪ್ರೊ. ಕೃಷ್ಣಪ್ಪಸ್ಥಾಪಿತ ರಾಜ್ಯ ಕಾರ್ಯದರ್ಶಿ ಎಂ. ದೇವದಾಸ್, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





