ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ

ಮಂಗಳೂರು,ಜು.5: ರೊಝಾರಿಯೊ ಪ್ರೌಢಶಾಲೆಯಲ್ಲಿ ವಿಶ್ವ ಮಾದಕ ದ್ರವ್ಯ ವಿರೋಧಿ ದಿನವನ್ನು ಆಚರಿಸಲಾಯಿತು. ಕೃಪಾ ಫೌಂಡೇಶನ್ ಮಂಗಳೂರು ಇದರ ಸಂಪನ್ಮೂಲ ವ್ಯಕ್ತಿಗಳಾದ ಪೂನಮ್, ರೂಪಾಶ್ರೀ, ಎಲಿಯಾಸ್, ರಘು ಮದ್ಯವ್ಯಸನದಿಂದಾಗುವ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮುಖ್ಯ ಶಿಕ್ಷಕ ಅಲೊಶೀಯಸ್ ಡಿಸೋಜ ಸ್ವಾಗತಿಸಿದರು. ಶಿಕ್ಷಕ ರೋಶನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.
Next Story





