ಆ್ಯಂಬುಲೆನ್ಸ್ ಮಾಲಕರ ಹಾಗೂ ಚಾಲಕರ ಘಟಕದ ಸಮಾವೇಶ

ಮಂಗಳೂರು, ಜು.6: ತುಳುನಾಡ ರಕ್ಷಣಾ ವೇದಿಕೆಯ ಆ್ಯಂಬುಲೆನ್ಸ್ ಮಾಲಕರ ಹಾಗೂ ಚಾಲಕರ ಘಟಕದ ಸಮಾವೇಶವು ನಗರದ ಜಪ್ಪು ಮಹಾಕಾಳಿಪಡ್ಪುರೈಲ್ವೆ ಗೇಟ್ ಬಳಿಯ ಸಂಕಪ್ಪಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು. ಉಪಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್ ಹೆಗಡೆ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಬಂದರು ಪೋಲಿಸ್ ಠಾಣೆಯ ಉಪ ನಿರೀಕ್ಷಕ ಎಂ.ಸಿ.ಮದನ್, ಕಾರ್ಮಿಕ ನಿರೀಕ್ಷಕರಾದ ವೀರೇಂದ್ರ ಹಾಗೂ ಮೇರಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ ಕರ್ನಾಟಕದಲ್ಲಿಯೇ ಪ್ರಥಮವಾಗಿ ತುಳುನಾಡಿನಲ್ಲಿ ತುರವೇ ಅಡಿಯಲ್ಲಿ ಆ್ಯಂಬುಲೆನ್ಸ್ ಮಾಲಕರ ಹಾಗೂ ಚಾಲಕರ ಸಂಘವನ್ನು ರಚಿಸಲಾಗಿದೆ. ಇದಕ್ಕಾಗಿ ಎಲ್ಲ ಆ್ಯಂಬುಲೆನ್ಸ್ ಮಾಲಕರು ಹಾಗೂ ಚಾಲಕರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಆ್ಯಂಬುಲೆನ್ಸ್ ಮಾಲಕ ಹಾಗೂ ಚಾಲಕರಿಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಹಾಗೂ ಚಾಲಕರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ದೊರಕಿಸಿ ಕೊಡಲಾಗುವುದು ಎಂದರು.
ಬಜ್ಪೆವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅವಘಡದ ಸಂದರ್ಭ ಆ್ಯಂಬುಲೆನ್ಸ್ ಮಾಲಕರು ಮತ್ತು ಚಾಲಕರ ಅವಿಸ್ಮರಣೀಯ ಸೇವೆಯನ್ನು ಪರಿಗಣಿಸಿ ಅಭಿನಂದನೆ ಸಲ್ಲಿಸಲಾಯಿತು.
ವೇದಿಕೆಯಲ್ಲಿ ತುರವೇ ಆ್ಯಂಬುಲೆನ್ಸ್ ಮಾಲಕರ ಹಾಗೂ ಚಾಲಕರ ಘಟಕದ ಅಧ್ಯಕ್ಷ ಗಂಗಾಧರ್, ಉಪಾಧ್ಯಕ್ಷರಾದ ನಿತ್ಯಾನಂದ ವಾಮಂಜೂರು, ದೇವಿಪ್ರಸಾದ್ ಕಾವೂರು, ಪ್ರಧಾನ ಕಾರ್ಯದರ್ಶಿ ಸಿ.ಎಸ್ ರಾಧಿಕಾ, ತು.ರ.ವೇ ಮುಖಂಡರಾದ ಅಬ್ದುಲ್ ರಶೀದ್ ಜಪ್ಪು, ಜೆ. ಇಬ್ರಾಹೀಂ, ಅರುಣ್ ಡಿಸೋಜ ಅಸೈಗೋಳಿ ಮುಂತಾದವರಿದ್ದರು
ಪ್ರಶಾಂತ್ ಭಟ್ ಕಡಬ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆನಂದ್ ಅಮೀನ್ ಅಡ್ಯಾರ್ ವಂದಿಸಿದರು. ರಹೀಮ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು.







