ಬೈಕ್ ಪರಸ್ಪರ ಢಿಕ್ಕಿ: ಮೆಕಾನಿಕ್ ಗಂಭೀರ
ಮಂಜೇಶ್ವರ ಜು.5: ತೂಮಿನಾಡು ರಾ. ಹೆದ್ದಾರಿಯ ದ್ವಾರದ ಬಳಿ ಮಂಗಳವಾರ ರಾತ್ರಿ 8 ಗಂಟೆಯ ಸುಮಾರಿಗೆ ಬೈಕ್ ಮುಖಾ ಮುಖಿ ಪರಸ್ಪರ ಢಿಕ್ಕಿ ಹೊಡೆದು ಉಂಟಾದ ಅಪಘಾದಲ್ಲಿ ಬೈಕ್ ಮೆಕಾನಿಕರೊಬ್ಬರು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕುಂಜತ್ತೂರು ಸಲಫೀ ಮಸೀದಿ ರಾಷ್ಟ್ರೀಯ ಹೆದ್ದಾರಿ ಬಳಿ ಕಾರ್ಯಾಚರಿಸುತ್ತಿರುವ ಚಂದ್ರ ಆಟೋ ವರ್ಕ್ಸ್ ಮಾಲಕ ಚಂದ್ರಹಾಸ(30) ಅಪಘಾತದಿಂದ ತಲೆಗೆ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ನಿಘಾ ಘಟಕದಲ್ಲಿ ದಾಖಲಿಸಲಾಗಿದೆ.
Next Story





