ಗೌರವಯುತವಾಗಿ ಹೋಗಿ, ಇಲ್ಲವೆ ಹೊರದಬ್ಬುತ್ತೇವೆ: ಚೀನೀ ಪತ್ರಿಕೆಗಳಿಂದ ಭಾರತಕ್ಕೆ ಎಚ್ಚರಿಕೆ

ಬೀಜಿಂಗ್, ಜು. 5: ಸಿಕ್ಕಿಂ ವಲಯದಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಏರ್ಪಟ್ಟಿರುವ ಸಂಘರ್ಷದ ಹಿನ್ನೆಲೆಯಲ್ಲಿ, ಚೀನಾದ ಅಧಿಕೃತ ಮಾಧ್ಯಮವು ಇಂದು ಭಾರತ ವಿರುದ್ಧದ ದಾಳಿಯನ್ನು ಹೆಚ್ಚಿಸಿದೆ.
ಸಿಕ್ಕಿಂ ಗಡಿಯ ಡೋಕಲಮ್ ಪ್ರದೇಶದಿಂದ ‘ಗೌರವಯುತವಾಗಿ’ ಹೊರಹೋಗುವಂತೆ ಪತ್ರಿಕೆಯ ಸಂಪಾದಕೀಯವು ಭಾರತೀಯ ಪಡೆಗಳಿಗೆ ಕರೆ ನೀಡಿದೆ, ಇಲ್ಲದಿದ್ದರೆ ‘ಹೊರದಬ್ಬಲಾಗುವುದು’ ಎಂದಿದೆ.
ಭಾರತಕ್ಕೆ ‘ಕಹಿ ಪಾಠ’ವನ್ನು ಕಲಿಸಬೇಕು ಎಂದು ಚೀನಾದ ರಾಷ್ಟ್ರೀಯವಾದಿ ಟ್ಯಾಬ್ಲಾಯಿಡ್ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಹೇಳಿದೆ. ಅದೇ ವೇಳೆ, ಭಾರತ ತನ್ನನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕು ಎಂದು ಇನ್ನೊಂದು ಅಧಿಕೃತ ಪತ್ರಿಕೆ ‘ಚೀನಾ ಡೇಲಿ’ ಹೇಳಿದೆ.
ಚೀನಾದೊಂದಿಗಿನ ಗಡಿ ತಂಟೆಗಳನ್ನು ಪ್ರಚೋದಿಸಿದರೆ ಭಾರತವು 1962ಕ್ಕಿಂತಲೂ ‘‘ಹೆಚ್ಚಿನ ನಷ್ಟ’’ಗಳನ್ನು ಅನುಭವಿಸುವುದು ಎಂದು ‘ಗ್ಲೋಬಲ್ ಟೈಮ್ಸ್’ ಎಚ್ಚರಿಸಿದೆ.
Next Story





