ಸ್ಥಳೀಯ ಉಪಚುನಾವಣೆ ಫಲಿತಾಂಶ ಪ್ರಕಟ
ಬೆಂಗಳೂರು,ಜು.5: ನಗರ ಸ್ಥಳೀಯ ಸಂಸ್ಥೆ ಹಾಗೂ ತಾಲೂಕು ಪಂಚಾಯತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲ ಸಾಧಿಸಿವೆ. ಮಂಡ್ಯ ಜಿಲ್ಲೆಯ ಕೊಪ್ಪ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿನ ನಗೆ ಬೀರಿದೆ.
ಉತ್ತರ ಕನ್ನಡ ಜಿಲ್ಲೆಯ ಮದನೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಬರುಡಗುಂಟೆ, ಚಿತ್ರದುರ್ಗ ಜಿಲ್ಲೆಯ ತಂಡಗ, ಬೆಳಗಾವಿಯ ಬಡಜಿ ತಾಲೂಕು ಪಂಚಾಯತ್ ಸೇರಿ ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ.
ಚಾಮರಾಜನಗರ ಜಿಲ್ಲೆಯ ಮಗಣಗಳ್ಳಿ, ಬಾಗಲಕೋಟೆಯ ಪಟ್ಟದಕಲ್ಲು, ಬಳ್ಳಾರಿಯ ವಣೇನೂರು, ಕಲಬುರಗಿ ಜಿಲ್ಲೆಯ ಭೀಮಳ್ಳಿ, ತೇಲ್ಕೂರು ತಾಲೂಕು ಪಂಚಾಯತ್ ಸೇರಿ ಒಟ್ಟು 5 ಕ್ಷೇತ್ರಗಳು ಬಿಜೆಪಿ ಪಾಲಾಗಿವೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಗೆ ಹಿನ್ನಡೆ: ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ಸಮಖ್ಯೆ 32, ಕೋಲಾರ ನಗರ ಸಭೆಯ ವಾರ್ಡ್ ನಂ.21, ಮಂಡ್ಯ ನಗರ ಸಭೆಯ ವಾರ್ಡ್ ನಂ. 28 ಕ್ಷೇತ್ರಗಳಲ್ಲಿ ಜೆಡಿಎಸ್ ಜಯ ಸಾಧಿಸಿದೆ. ಬೀದರ್ ನಗರ ಸಭೆಯಹ ವಾರ್ಡ್ ನಂ.33, ನರೇಗಲ್ ಪಟ್ಟಣ ಪಂಚಾಯತ್ ವಾರ್ಡ್ ನಂ 15, ಸೇಡಂ ಪುರಸಭೆಯ ವಾರ್ಡ್ ನಂ.15ರಲ್ಲಿ ಐನಾಪುರ ಪಟ್ಟಣ ಪಂಚಾಯತ್ ವಾರ್ಡ್ ನಂ. 15ರಲ್ಲಿ ಕಾಂಗ್ರೆಸ್ ಜಯದ ಕೇಕೆ ಹಾಕಿದೆ.
ಹುನಗುಂದ ಪುರಸಭೆಯ ವಾರ್ಡ್ ನಂ.3ರಲ್ಲಿ ಬಿಜೆಪಿ, ರಾಣೆಬೆನ್ನೂರು ನಗರ ಸಭೆ ವಾರ್ಡ್ ನಂ.30, ಬೆಳಗಲಿ ಪಟ್ಟಣ ಪಂಚಾಯತ್ಯ ವಾರ್ಡ್ ನಂ. 8 ಪಕ್ಷೇತರರ ಪಾಲಾಗಿವೆ.
ವಿವಿಧ ಕಾರಣಗಳಿಂದ ತೆರವಾಗಿದ್ದ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸದಸ್ಯ ಸ್ಥಾನಗಳಿಗೆ ಜು.2ರಂದು ಮತದಾನ ನಡೆದಿತ್ತು.







