ಎಸಿಬಿ ಬಲೆಗೆ ಜಲಪರೀಕ್ಷಕ

ಬೆಂಗಳೂರು, ಜು.5: ಮನೆಗಳಿಗೆ ನೀರು ಸಂಪರ್ಕ ಕಲ್ಪಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಜಲಪರೀಕ್ಷಕನೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು ಜಲ ಮಂಡಳಿಯ ಕುಮಾರಸ್ವಾಮಿ ಬಡಾವಣೆ ಸೇವಾ ಠಾಣೆಯ ಜಲಪರೀಕ್ಷಕ ವೆಂಕಟರಮಣಪ್ಪ ವಿರುದ್ಧ ಎಸಿಬಿ ಮೊಕದ್ದಮೆ ದಾಖಲು ಮಾಡಿದೆ.
ನಗರ ಶ್ರೀನಿವಾಸಪುರ ಕಾಲನಿಯ ಬಿಡಿಎ ಬಡಾವಣೆ ನಿವಾಸಿಯೊಬ್ಬರು ಕುಮಾರಸ್ವಾಮಿ ಲೇಔಟ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಎರಡು ಮನೆಗಳಿಗೆ ನೀರು ಮತ್ತು ಒಳಚರಂಡಿ ಸಂಪರ್ಕ ನೀಡಲು ಗುತ್ತಿಗೆ ಪಡೆದಿರುತ್ತಾರೆ. ಈ ಸಂಬಂಧ ಸಂಪರ್ಕ ಪಡೆಯಲು ಅನುಮತಿಗಾಗಿ ಬನಗಿರಿನಗರದ ಜಲಮಂಡಳಿ ಎಸ್1 ಉಪವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಸಂಪರ್ಕಕ್ಕಾಗಿ ಅನುಮತಿ ನೀಡಲು 40 ಸಾವಿರ ರೂ. ಲಂಚ ನೀಡುವಂತೆ ಒತ್ತಡ ಹಾಕಿದ್ದರು ಎಂದು ಆರೋಪಿಸಿ ಎಸಿಬಿಗೆ ದೂರು ಸಲ್ಲಿಸಲಾಗಿತ್ತು.
Next Story





