ಹಿಂದೂ ಮಹಾಸಾಗರದಲ್ಲಿ ಜಮಾಯಿಸುತ್ತಿರುವ ಚೀನಿ ಯುದ್ಧನೌಕೆಗಳು

ಬೀಜಿಂಗ್, ಜು. 5: ಭಾರತ, ಅಮೆರಿಕ ಮತ್ತು ಜಪಾನ್‌ಗಳನ್ನೊಳಗೊಂಡ ಮಲಬಾರ್ ನೌಕಾಭ್ಯಾಸಕ್ಕೆ ಮುನ್ನ ಹಿಂದೂ ಮಹಾಸಾಗರದಲ್ಲಿ ಚೀನಾದ ಉಪಸ್ಥಿತಿಯು ಗಣನೀಯವಾಗಿ ಹಿಗ್ಗಿದೆ.
ಸಬ್‌ಮರೀನ್‌ಗಳು, ಡೆಸ್ಟ್ರಾಯರ್‌ಗಳು ಮತ್ತು ಗುಪ್ತಚರ ಮಾಹಿತಿ ಸಂಗ್ರಹ ನೌಕೆಗಳು ಸೇರಿದಂತೆ ಡಝನ್‌ಗೂ ಅಧಿಕ ಚೀನೀ ಯುದ್ಧ ನೌಕೆಗಳನ್ನು ಭಾರತೀಯ ನೌಕಾಪಡೆಯು ಕಳೆದ ಎರಡು ತಿಂಗಳ ಅವಧಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಪತ್ತೆಹಚ್ಚಿದೆ.
ಹತ್ತು ದಿನಗಳ ನೌಕಾಭ್ಯಾಸವು ಉತ್ತರ ಹಿಂದೂ ಮಹಾಸಾಗರದಲ್ಲಿ ಜುಲೈ 10ರಂದು ಆರಂಭಗೊಳ್ಳಲಿದೆ. ಅಮೆರಿಕದ ವಿಮಾನವಾಹಕ ನೌಕೆ ಯುಎಸ್‌ಎಸ್ ನಿಮಿಟ್ಝ್, ಭಾರತದ ವಿಮಾನವಾಹಕ ನೌಕೆ ವಿಕ್ರಮಾದಿತ್ಯ ಮತ್ತು ಜಪಾನ್‌ನ ಇಝುಮೊ ದರ್ಜೆಯ ಹೆಲಿಕಾಪ್ಟರ್ ವಾಹಕ ನೌಕೆಗಳು ಸೇರಿದಂತೆ 20ಕ್ಕ ಅಧಿಕ ಯುದ್ಧ ನೌಕೆಗಳು ಭಾಗವಹಿಸಲಿವೆ.
Next Story





