ಹನೂರು: ಬಾರ್‌ಗಳ ಹೆಚ್ಚಾಳ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ಹನೂರು, ಜು. 5: ಪಟ್ಟಣದ ಬಂಡಳ್ಳಿ ರಸ್ತೆಯ ಬಾರ್‌ಗಳು ಬಂಡಳ್ಳಿ ಮುಖ್ಯ ರಸ್ತೆಗೆ ಸ್ಥಳಾಂತರ ಗೊಂಡಿರುವುದರ ವಿರುದ್ಧ ಪಟ್ಟಣದ ಗ್ರಾಮಸ್ಥರು ತಮ್ಮ ಅಂಗಡಿ ಮಳಿಗೆಗಳನ್ನು ಸ್ವಯಂ ಪ್ರೇರಿತ ಮುಚ್ಚಿ ಖಾಸಗಿ ಬಸ್ ನಿಲ್ದಾಣದಲ್ಲಿ ಜಮಾಯಿಸಿ ಮೌನ ಮೆರವಣಿಗೆ ಮುಂಖಾತರ ತಾಲ್ಲೂಕು ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಹಿರಿಯ ಮುಖಂಡ ಲಿಂಗೇಗೌಡ ಬಾರ್‌ಗಳು ಸ್ತಾಪನೆಯಾಗುತ್ತಿರುವ ಸಮೀಪದಲ್ಲೇ ಶಾಲೆ, ಕಾಲೇಜುಗಳು, ಜನವಸತಿ ಹಾಗೂ ಆಸ್ಪತ್ರೆ ಇವೆ. ಆದ್ದರಿಂದ ಇಲ್ಲಿ ಯಾವುದೇ ಕಾರಣಕ್ಕೂ ಬಾರ್ ಸ್ಥಾಪನೆಗೆ ಆವಕಾಶ ನೀಡಬಾರದು. ಇದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ಕಿರಿ ಕಿರಿ ಉಂಟಾಗುತ್ತದೆ ಎಂದು ಮನವಿ ಸಲ್ಲಿಸಿದರು.
ಹನೂರು ಬಂದ್‌ಗೆ ಕರೆ: ಹನೂರು ಪಟ್ಟಣದಲ್ಲಿ ಬಾರ್‌ಗಳು ಬಂಡಳ್ಳಿ ಮುಖ್ಯರಸ್ತೆಗೆ ಸ್ಥಳಾಂತರಗೊಂಡಿರುವುದರ ವಿರುದ್ಧ ಬಂದ್‌ಗೆ ಕರೆ ನೀಡಲಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುಂಖಡರಾದ ವೆಂಕಟರಮಣನಾಯ್ಡು ಶಿವರಾಮೇಗೌಡ ಜಯಪ್ರಕಾಶಗುಪ್ತ ಮಾದೇಶ್ ರಾಜುಗೌಡ, ರಾಜುಗೌಡ ಮಹೇಶ್ ಕೃಷ್ಣ, ಬಾಲರಾಜನಾಯ್ಡು, ಮರೀಗೌಡ, ವೆಂಕಟೇಶ್, ನಝೀರ್, ಚೇತನ್, ವಿನೋದ್, ರವೀಂದ್ರ, ಶಂಕರ್, ಅಶ್ವಿ, ಬೋಲಾರಾಂ ಇನ್ನಿತರರು ಹಾಜರಿದ್ದರು.







