ರಾಮ ಪಿ.ಮಾಬಿಯಾನ್
.jpg)
ಮುಂಬೈ, ಜು.5: ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ ಇರಾನಿ ಚಾಳ್ ಇದರ ಸ್ಥಾಪಕ ಸದಸ್ಯ, ಮಾಜಿ ಅಧ್ಯಕ್ಷ, ಫೋರ್ಟ್ ವೆಸ್ಟರ್ನ್ ಇಂಡಿಯಾ ಶನೀಶ್ವರ ಪೂಜಾ ಸಮಿತಿ ಇದರ ಸ್ಥಾಪಕ ಸದಸ್ಯ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ, ಗೋರೆಗಾಂವ್ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಯ ಮಾಜಿ ಸದಸ್ಯ ರಾಮ ಪಿ.ಮಾಬಿಯಾನ್ (93) ಬುಧವಾರ ಸಂಜೆ ಗೋರೆಗಾಂವ್ ಪಶ್ಚಿಮದ ತಿಲಕ್ ರಸ್ತೆಯಲ್ಲಿನ ಸ್ವನಿವಾಸದಲ್ಲಿ ನಿಧನರಾದರು.
ಉಡುಪಿ ಜಿಲ್ಲೆಯ ಕಾಪು ಪಾದೂರು ಮಡಂತೋಟ ನಿವಾಸಿಯಾಗಿದ್ದು, ಮುಂಬೈಯಲ್ಲಿ ನೆಲೆಸಿ ರ್ಯಾಲೀಸ್ ಇಂಡಿಯಾ ಲಿಮಿಟೆಡ್ ಇದರಲ್ಲಿ ಸುದೀರ್ಘಾವಧಿ ಅಧಿಕಾರಿಗಾಗಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ್ದರು.
ಮೃತರು ಪತ್ನಿ, ನಾಡಿನ ಹಿರಿಯ ಸಾಹಿತಿ ರವಿ ರಾ.ಅಂಚನ್ ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ರಾಮ ಪಿ.ಮಾಬಿಯಾನ್ ನಿಧನಕ್ಕೆ ನಗರದ ಹಲವು ಸಂಘಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ರಾತ್ರಿ ಅಂಧೇರಿ ಪಶ್ಚಿಮದ ಓಶಿವಾರ ಸ್ಮಶಾನ ಭೂಮಿಯಲ್ಲಿ ನೆರವೇರಿಸಲ್ಪಟ್ಟಿತು.





