ಬಾಲಕನ ಅಪಹರಣ ಶಂಕೆ: ದೂರು
ಉಡುಪಿ, ಜು.5: ಮೂಲತಃ ಬಾಗಲಕೋಟೆ ಹುನಗುಂದ ತಾಲೂಕಿನ ಭೀಮನಗಢ, ಪ್ರಸ್ತುತ ಕುಕ್ಕಿಕಟ್ಟೆ ನಿವಾಸಿ ಮಲ್ಲಪ್ಪಮಾನಪ್ಪಹರದೊಳ್ಳಿ(52) ಎಂಬವರ ಮಗ ಧರ್ಮಣ್ಣ ಮಲ್ಲಪ್ಪ ಹರದೊಳ್ಳಿ(16) ಎಂಬಾತ ಜೂ.28 ರಂದು ಬೆಳಗ್ಗೆ ಮನೆಯಿಂದ ತರಕಾರಿ ತರಲೆಂದು ಹೋದವನು ವಾಪಾಸು ಬಾರದೆ ನಾಪತ್ತೆಯಾಗಿದ್ದಾನೆ.
ಈ ಬಗ್ಗೆ ಸುತ್ತಮುತ್ತಲಿನ ಜನರಲ್ಲಿ ವಿಚಾರಿಸಿದಾಗ ಆತನನ್ನು ಯಾರೋ ಒಂದು ಕಾರಿನಲ್ಲಿ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ. ತನ್ನ ಮಗನನ್ನು ವಿಜಾಪುರ ಜಿಲ್ಲೆಯ ಪಾವಾಡೇಪ್ಪ, ವಿಠಲ ಪಡಗನೂರ ಹಾಗೂ ಶೇಖಪ್ಪಇಂಗ್ಳೇಶ್ವರ ಎಂಬವರು ಕರೆದುಕೊಂಡು ಹೋಗಿರಬಹುದಾಗಿ ಮಲ್ಲಪ್ಪ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





