ಮೊಬೈಲ್ ಜಾಮರ್ ಟವರ್‌ಗೆ ಹತ್ತಿದ್ದ ಮಾನಸಿಕ ಅಸ್ವಸ್ಥ ವಿಚಾರಣಾಧೀನ ಕೈದಿ
ಮಂಗಳೂರು, ಜು.5: ಉಪ ಕಾರಾಗೃಹದಲ್ಲಿ ಮೊಬೈಲ್ ಜಾಮರ್ ಟವರ್‌ಗೆ ಹತ್ತಿದ್ದ ಮಾನಸಿಕ ಅಸ್ವಸ್ಥ ವಿಚಾರಣಾಧೀನ ಕೈದಿಯೋರ್ವನನ್ನು ರಕ್ಷಿಸಿ, ಕೆಳಗಿಳಿಸಲು ಹತ್ತಿದ್ದ ಇನ್ನೋರ್ವ ವಿಚಾರಣಾಧೀನ ಕೈದಿ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಾಳು ವಿಚಾರಣಾಧೀನ ಕೈದಿಯನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ವಿಠಲ ಗಾಯಗೊಂಡ ವಿಚಾರಣಾಧೀನ ಕೈದಿ ಎಂದು ಗುರುತಿಸಲಾಗಿದೆ.
ಕಾರ್ಕಳದಲ್ಲಿ ಮಗುವಿಗೆ ಹೊಡೆದು ಸಾವಿಗೆ ಕಾರಣನಾದ ಮಾನಸಿಕ ಅಸ್ವಸ್ಥನಾಗಿರುವ ಉಮೇಶ್ ಗೌಡ ಊಟಕ್ಕೆ ಬಿಟ್ಟ ಸಂದರ್ಭ ಮೊಬೈಲ್ ಜಾಮರ್ ಟವರ್‌ಗೆ ಹತ್ತಿದ್ದ. ಆತನ ರಕ್ಷಣೆಗೆ ಹೋದ ವಿಠಲ ಬಿದ್ದು ಗಾಯಗೊಂಡಿದ್ದಾನೆ.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





