ಬಿಜೆಪಿ ನಾಯಕರನ್ನು ಗೌರವಯುತವಾಗಿ ನಡೆಸಿಕೊಳ್ಳಿ: ಯುಪಿಪಿಸಿಎಲ್ ಅಧಿಕಾರಿಗಳಿಂದ ಸಿಬಂದಿಗೆ ಆದೇಶ

ಲಕ್ನೋ, ಜು. 4: ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ಗೌರವಯುತ ವಾಗಿ ನಡೆಸಿಕೊಳ್ಳಿ ಎಂಬ ರಾಜ್ಯ ವಿದ್ಯುತ್ ಇಲಾಖೆ ನಿರ್ದೇಶನ ಉತ್ತರಪ್ರದೇಶದ ವಿರೋಧ ಪಕ್ಷಗಳ ಕಟು ಟೀಕೆಗೆ ಒಳಗಾಗಿದೆ.
ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕಛೇರಿಗೆ ಭೇಟಿ ನೀಡಿದಾಗ ಗೌರವಯುತವಾಗಿ ನಡೆಸಿಕೊಳ್ಳಿ ಎಂದು ದಕ್ಷಿಣ ವಿದ್ಯುತ್ ವಿತರಣೆ ಮಂಡಳಿಯ ಹಿರಿಯ ಅಧಿಕಾರಿಗಳು ಉದ್ಯೋಗಿಗಳಿಗೆ ಆದೇಶ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ಗೌರವಯುತವಾಗಿ ನೋಡಿಕೊಳ್ಳುತ್ತಿಲ್ಲ ಎಂಬುದು ಗಮನಕ್ಕೆ ಬಂದೆದೆ. ನೀವೆಲ್ಲರೂ ಅವರನ್ನು ಗೌರವಯುತ ವಾಗಿ ನೋಡಿಕೊಳ್ಳಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ.
ಈ ಕ್ರಮಕ್ಕೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ವಿರೋಧ ಪಕ್ಷಗಳು, ಇದು ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರಿಗಾಗಿ ಕೆಲಸ ಮಾಡುವಂತೆ ಸರಕಾರ ಒತ್ತಡ ಹೇರುವಂತೆ ಕ್ರಮ ಎಂದಿದೆ.
Next Story





