ಪಾಲಡ್ಕ: ಇಬ್ಬರು ನಾಪತ್ತೆ

ಮೂಡುಬಿದಿರೆ, ಜು. 5: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಕಾಣೆಯಾಗಿರುವ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಹತ್ತನೆ ತರಗತಿಯ ಬಾಲಕಿಯನ್ನು ಎರಡನೆ ಬಾರಿ ವಾಮದಪದವಿನ ಪದ್ಮನಾಭ ಹಾಗೂ ಚಂದಪ್ಪ ಎನ್ನುವವರು ಬಾಲಕಿಯ ಹೆತ್ತವರು ಮನೆಯಲ್ಲಿಲ್ಲದ ವೇಳೆ ಕರೆದುಕೊಂಡು ಹೋಗಿರುವುದಾಗಿ ದೂರು ನೀಡಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಸಚ್ಚೇರಿಪೇಟೆಯ ಬಟ್ಟೆಯಂಗಡಿಯೊಂದಕ್ಕೆ ಕೆಲಸಕ್ಕೆಂದು ಹೋದ ಯುವತಿಯೋರ್ವಳು ಕಳೆದ ಜೂ. 27ರಿಂದ ನಾಪತ್ತೆಯಾಗಿದ್ದು ಸಂಬಂಧಿಕರು ಮತ್ತು ನೆರೆಹೊರೆಯವರಲ್ಲಿ ವಿಚಾರಿಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Next Story





