ನಟ ಇನ್ನೊಸೆಂಟ್ ಹೇಳಿಕೆ ವಿವಾದ

ತಿರುವನಂತಪುರ, ಜು. 4: ಮಲೆಯಾಳಂ ಚಿತ್ರೋದ್ಯಮದ ನಟಿಯರ ಕುರಿತಂತೆ ಕೆಟ್ಟ ನಟಿಯರು ಮಾತ್ರ ಹಾಸಿಗೆ ಹಂಚಿಕೊಳ್ಳಲು ಸಾಧ್ಯ ಎಂದು ಹೇಳುವ ಮೂಲಕ ಪ್ರಸಿದ್ಧ ನಟ, ಸಂಸತ್ ಸದಸ್ಯ ಹಾಗೂ ಅಮ್ಮಾ (ಮಲೆಯಾಳಂ ಮೂವಿ ಆರ್ಟಿಸ್ಟ್ಸ್ ಅಸೋಶಿಯೇಶನ್)ದ ಅಧ್ಯಕ್ಷ ಇನ್ನೊಸೆಂಟ್ ವಿವಾದಕ್ಕೆ ಸಿಲುಕಿದ್ದಾರೆ. ಈಗ ಕಾಲ ಬದಲಾಗಿದೆ. ವಿವೇಚನಾರಹಿತವಾಗಿ ಮಹಿಳೆಯರಲ್ಲಿ ಏನಾದರೂ ಮಾಡಲು ಹೇಳಿದರೆ, ಕ್ಷಣದಲ್ಲಿ ಅವರು ಮಾದ್ಯಮ ಹಾಗೂ ಸಾರ್ವಜನಿಕರ ಎದುರು ಪ್ರದರ್ಶಿಸಲು ಹೇಸುವುದಿಲ್ಲ ಎಂದು ಇನ್ನೊಸೆಂಟ್ ಹೇಳಿದ್ದಾರೆ.
Next Story





