ಕರಾವಳಿಯಲ್ಲಿ ಸೌಹಾರ್ದಕ್ಕಾಗಿ ಪಾದಯಾತ್ರೆ: ಕುಮಾರಸ್ವಾಮಿ
.jpg)
ಬೆಂಗಳೂರು, ಜು.6: ರಾಷ್ಟ್ರೀಯ ಪಕ್ಷಗಳಿಂದಲೇ ರಾಜ್ಯದ ಕರಾವಳಿ ಭಾಗದಲ್ಲಿ ಸೌಹಾರ್ದ ಭಾವನೆ ನಾಶವಾಗಿದೆ. ಹೀಗಾಗಿ, ಜೆಡಿಎಸ್ ವತಿಯಿಂದ ಶಾಂತಿ ಸಭೆ ಮತ್ತು ಸೌಹಾರ್ದ ಪಾದಯಾತ್ರೆ ನಡೆಸಲಾಗುವುದೆಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಮತ್ತು ಕೋರ್ ಕಮಿಟಿ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎರಡು ತಿಂಗಳಿನಿಂದ ಕರಾವಳಿ ಭಾಗದಲ್ಲಿ ಸೌಹಾರ್ದ ಭಾವನೆಗಳನ್ನು ನಾಶ ಮಾಡುವ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ರಾಷ್ಟ್ರೀಯ ಪಕ್ಷಗಳು ಮೂಲ ಕಾರಣ. ಹೀಗಾಗಿ, ಏಳೆಂಟು ದಿನಗಳಲ್ಲಿ ಬಂಟ್ವಾಳ, ಮಂಗಳೂರಿನಲ್ಲಿ ಜೆಡಿಎಸ್‌ವತಿಯಿಂದ ಬೃಹತ್ ಶಾಂತಿ ಸಭೆ ಮತ್ತು ಪಾದಯಾತ್ರೆ ನಡೆಸಲಾಗುವುದೆಂದು ಹೇಳಿದರು.
Next Story





