ಬ್ರಿಟನ್: ಭಾರತ ಮೂಲದ ಅತ್ಯಾಚಾರಿಗೆ 8 ವರ್ಷ ಜೈಲು

ಲಂಡನ್, ಜು. 6: ತನ್ನನ್ನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಮಹಿಳೆಯೊಬ್ಬರ ಮೇಲೆ ಅತ್ಯಾಚಾರಗೈದ ಭಾರತ ಮೂಲದ ವ್ಯಕ್ತಿಯೊಬ್ಬನಿಗೆ ಬ್ರಿಟನ್‌ನ ನ್ಯಾಯಾಲಯವೊಂದು ಎಂಟು ವರ್ಷಗಳಿಗೂ ಅಧಿಕ ಅವಧಿಯ ಜೈಲು ಶಿಕ್ಷೆ ವಿಧಿಸಿದೆ ಹಾಗೂ ಆತನ ಹೆಸರನ್ನು ಬ್ರಿಟನ್‌ನ ಲೈಂಗಿಕ ಅಪರಾಧಿಗಳ ಪಟ್ಟಿಯಲ್ಲಿ ಜೀವನಪರ್ಯಂತ ಹಾಕಲಾಗಿದೆ.
ಕೊವೆಂಟ್ರಿ ನಗರದ ನಿವಾಸಿ ರಣದೀಪ್ ಟಾಮ್ನೆ ಎಂಬಾತ ಆನ್‌ಲೈನ್ ಡೇಟಿಂಗ್ ವೆಬ್‌ಸೈಟ್ ಒಂದರಲ್ಲಿ ನಕಲಿ ಹೆಸರೊಂದರಿಂದ ಮಹಿಳೆಯೊಬ್ಬರನ್ನು ಭೇಟಿಯಾದ. ಬಳಿಕ 2016 ಜುಲೈ 30ರಂದು ಆ ಮಹಿಳೆಯನ್ನು ತನ್ನ ಮನೆಯಲ್ಲಿ ಭೇಟಿಯಾದ. ಈ ಸಂದರ್ಭದಲ್ಲಿ ಆತ ತನ್ನನ್ನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಮಹಿಳೆಯ ಮೇಲೆ ಅತ್ಯಾಚಾರಗೈದ ಹಾಗೂ ಆಕೆಯಿಂದ ಹಣವನ್ನೂ ಸುಲಿಗೆ ಮಾಡಿದ ಎಂದು ಆರೋಪಿಸಲಾಗಿದೆ.
Next Story





