ಮೂರೂ ತಾಲ್ಲೂಕುಗಳಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಸ್ಥಾಪನೆ: ಶೌಕತ್ ಅಲಿ

ಮಡಿಕೇರಿ ಜು.6: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಭೆಯು ಜು.12 ರಂದು ನಿಗಮದ ಅಧ್ಯಕ್ಷರಾದ ಶಾಸಕ ಗೋಪಾಲ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕೊಡಗಿನ ಮೂರೂ ತಾಲ್ಲೂಕುಗಳಲ್ಲಿ ಬಸ್ ಡಿಪೋಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಕೆಎಸ್‌ಆರ್‌ಟಿಸಿ ನಿರ್ದೇಶಕರಾದ ಎಂ.ಎ.ಶೌಕತ್ ಆಲಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಡಗು ಜಿಲ್ಲೆದೇಶದಲ್ಲಿಯೇ ಅತ್ಯಂತ ಆಕರ್ಷಣೀಯ ಪ್ರವಾಸಿ ಕೇಂದ್ರವಾಗಿದ್ದು, ದೇಶದ ಎಲ್ಲೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. ಜಿಲ್ಲೆಯ ಜನರಿಗೆ ಹಾಗೂ ಪ್ರವಾಸಿಗರಿಗೆ ಸಮರ್ಪಕ ರೀತಿಯಲ್ಲಿ ಬಸ್ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶವನ್ನು ಕೆಎಸ್‌ಆರ್‌ಟಿಸಿ ಹೊಂದಿದೆ ಎಂದು ತಿಳಿಸಿದ್ದಾರೆ.
ಮಡಿಕೇರಿ ನಗರದಲ್ಲಿ ಮಾತ್ರ ಬಸ್ ಡಿಪೋವಿದ್ದು, ಉಳಿದಿರುವ ಪ್ರಮುಖ ಪಟ್ಟಣಗಳಿಗೂ ಡಿಪೋಗಳ ಅಗತ್ಯವಿದೆ. ವಿರಾಜಪೇಟೆ, ಸೋಮವಾರಪೇಟೆ, ಶನಿವಾರಸಂತೆ ಮತ್ತು ಕುಶಾಲನಗರದಲ್ಲಿ ಡಿಪೋನಿರ್ಮಾಣಕ್ಕೆ ಸೂಕ್ತಸ್ಥಳಾವಕಾಶವಿದೆ. ಈ ಪ್ರದೇಶದಲ್ಲಿ ನಿಗಮದ ಬಸ್ ಘಟಕ ನಿರ್ಮಾಣಕ್ಕೆ ಬಹುದಿನಗಳಿಂದ ಬೇಡಿಕೆಯಿದ್ದು, ಜು.12 ರಂದು ನಡೆಯುವ ಸಭೆಯಲ್ಲಿ ಬೇಡಿಕೆ ಕುರಿತು ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಲಾಗುವುದೆಂದು ಶೌಕತ್ ಆಲಿ ತಿಳಿಸಿದ್ದಾರೆ.
ಕುಶಾಲನಗರದಲ್ಲಿರುವಕೆಎಸ್‌ಆರ್‌ಟಿಸಿಬಸ್ ನಿಲ್ದಾಣ ಕಿರಿದಾಗಿದ್ದು,ವಿಸ್ತರಣೆ ಮತ್ತು ಅಧುನೀಕರಣಗೊಳ್ಳುವ ಅಗತ್ಯವಿದೆ. ಈ ಬಗ್ಗೆಯೂ ಅಧ್ಯಕ್ಷರ ಗಮನ ಸೆಳೆಯಲಾಗುವುದು. ಬಸ್ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವುದರಿಂದ ಆದಾಯವೂ ಹೆಚ್ಚಾಗಲಿದೆ, ಅಲ್ಲದೆಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದು ಶೌಕತ್ ಆಲಿ ಹೇಳಿದ್ದಾರೆ.







