ಗಡಿಪಾರು ವಿಚಾರಣೆ: ನ್ಯಾಯಾಲಯಕ್ಕೆ ಹಾಜರಾದ ಮಲ್ಯ

ಲಂಡನ್, ಜು. 6: ಭಾರತದ ಹಲವಾರು ಬ್ಯಾಂಕ್‌ಗಳಿಗೆ 9,000 ಕೋಟಿ ರೂಪಾಯಿ ವಂಚಿಸಿ ಲಂಡನ್‌ಗೆ ಪರಾರಿಯಾಗಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ, ಭಾರತಕ್ಕೆ ತನ್ನ ಗಡಿಪಾರು ಪ್ರಕರಣಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ವಿಚಾರಣೆ ಎದುರಿಸಲು ಗುರುವಾರ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾದರು.
ಜೂನ್ 13ರಂದು ನಡೆದ ವಿಚಾರಣೆಯಲ್ಲಿ, ಪ್ರಕರಣದಲ್ಲಿ ಸ್ವತಃ ಹಾಜರಾಗುವುದರಿಂದ ನ್ಯಾಯಾಧೀಶರು ಅವರಿಗೆ ವಿನಾಯಿತಿ ನೀಡಿದ್ದರು.
ವಿನಾಯಿತಿ ಇದ್ದರೂ ನೀವೇಕೆ ಹಾಜರಾದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ 61 ವರ್ಷದ ಮಲ್ಯ, ‘‘ನನ್ನ ವಕೀಲರು ಹೇಳಿದಂತೆ ನಾನು ಮಾಡುತ್ತೇನೆ’’ ಎಂದರು.
ಹಲವು ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಸದೆ ವಂಚಿಸಿದ ಪ್ರಕರಣದಲ್ಲಿ, ಮಲ್ಯ ವಿರುದ್ಧ ಹಲವು ನ್ಯಾಯಾಲಯಗಳು ಬಂಧನ ವಾರಂಟ್ ಹೊರಡಿಸಿವೆ.
ಅವರು ಮಾರ್ಚ್ 16ರಂದು ಬ್ರಿಟನ್‌ಗೆ ಪಲಾಯನಗೈದಿದ್ದಾರೆ.
Next Story





