ಜು.8: ‘ಬಸವರ ಹಾದಿಯಲ್ಲಿ ಜನನಾಯಕರು’ ಚಿಂತನಾಗೋಷ್ಠಿ
ಬೆಂಗಳೂರು, ಜು.6: ಬಸವ ಕ್ರಾಂತಿ ವೇದಿಕೆಯ ಉದ್ಘಾಟನಾ ಸಮಾರಂಭ ಹಾಗೂ ‘ಬಸವರ ಹಾದಿಯಲ್ಲಿ ಜನನಾಯಕರು’ ಕುರಿತು ಚಿಂತನಾಗೋಷ್ಠಿಯನ್ನು ಜು. 8ರಂದು ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಬಸವಕ್ರಾಂತಿ ವೇದಿಕೆಯ ಅಧ್ಯಕ್ಷ ಇಂದ್ರಜಿತ್ ಲಂಕೇಶ್, ಟೌನ್‌ಹಾಲ್‌ನಲ್ಲಿ ಸಂಜೆ 6 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮೈಸೂರಿನ ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ರಾಜದೇಶಿಕೇಂದ್ರ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಪಾಲ್ಗೊಳ್ಳುವರು. ಇದೇ ವೇಳೆ ಗಡಿಯಂಚಿನ ಕದನದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಉತ್ತರ ಕರ್ನಾಟಕದ ಸೈನಿಕ ಹನುಮಂತಪ್ಪ ಅವರ ಕುಟುಂಬವನ್ನು ಗೌರವಿಸಲಾಗುವುದು ಎಂದು ಹೇಳಿದರು.
Next Story





