ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎ.ಎಚ್ ದೊಡ್ಡಮನಿ ನಿಧನ
ಮುಂಡಗೋಡ, ಜು.6 : ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಮೀರ್ ಹುಸೇನ್ ದೊಡ್ಡಮನಿ ಇಂದು ಮಧ್ಯಾಹ್ನ ತಾಲೂಕಿನ ನ ನ್ಯಾಸರ್ಗಿ ಗ್ರಾಮದ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.
ಮೃತರು ತಮ್ಮ ಹಿಂದೆ ನಾಲ್ಕು ಗಂಡು ಮಕ್ಕಳು ಎರಡು ಹೆಣ್ಣು ಮಕ್ಕಳು ಹಾಗೂ ಅಪಾರ ಸ್ನೇಹಿತರು ಬಂಧುಗಳನ್ನು ಅಗಲಿದ್ದಾರೆ.
ಅವರ ಸಮಾಜ ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಬಂದಿದ್ದವು.
ಕಾಕಾ ಕಾಲೇಲ್ಕರ ಪ್ರಶಸ್ತಿ, ಎನ್.ಎಸ್ಸಿ ರಾಜ್ಯ ಪ್ರಶಸ್ತಿ, ಅತ್ಯುತ್ತಮ ರೊಟರಿ ಕ್ಲಬ್ ಅಧ್ಯಕ್ಷ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಹಾಗೂ 1997 ರಲ್ಲಿ ರಾಷ್ಟ್ರಪ್ರಶಸ್ತಿ ಗೆ ಭಾಜನರಾಗಿದ್ದರು.
ಮೃತರ ನಿಧನಕ್ಕೆ ಬೃಹತ್ ಹಾಗೂ ಮಾಧ್ಯಮ ಕೈಗಾರಿಕಾ ಸಚಿವ ಮತ್ತು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕ ಶಿವರಾಮ ಹೆಬ್ಬಾರ, ಮುಸ್ಲೀಂ ಹಿರಿಯ ಧುರಿಣರಾದ ಬಿ.ಎಫ್.ಬೆಂಡಿಗೇರಿ, ಎಮ್.ಕೆ ಗಡವಾಲೆ ಸೇರಿದಂತೆ ಜಿಲ್ಲೆಯ ವಿವಿಧ ಪಕ್ಷದ ಗಣ್ಯರು ಹಾಗೂ ಶಿಕ್ಷಕ ವೃಂದದವರು ಹಾಗೂ ಸ್ನೇಹಿತರು ಕಂಬನಿಮಿಡಿದು ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ





