ಕೃಷ್ಣಮೃಗ ಭೇಟೆ ಪ್ರಕರಣ: ಸಲ್ಮಾನ್ ಖಾನ್ ವಿಚಾರಣೆ ಜು 22ಕ್ಕೆ

ಹೊಸದಿಲ್ಲಿ, ಜು. 6: ಕೃಷ್ಣಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿ ಸಲ್ಮಾನ್ ಖಾನ್ ವಿಚಾರಣೆಯನ್ನು ಜೋಧಪುರ್ ಮುಖ್ಯ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ಜುಲೈ 22ಕ್ಕೆ ನಿಗದಿಪಡಿಸಿದೆ.
ಜೂನ್ 14ರಂದು ಪ್ರಕರಣವನ್ನು ಜುಲೈ 6ಕ್ಕೆ ಮುಂದೂಡಲಾಗಿತ್ತು.
1999ರಲ್ಲಿ ಸೂರಜ್ ಬರ್ಜತ್ಯಾ ಅವರ ಚಿತ್ರ ಹಮ್ ಸಾತ್ ಸಾತ್ ಹೈ ಶೂಟಿಂಗ್ ಸಂದರ್ಭ ಸಲ್ಮಾನ್ ಖಾನ್ ಕಂಕನಿ ಗ್ರಾಮದಲ್ಲಿ ಕೃಷ್ಣ ಮೃಗವನ್ನು ಭೇಟಿಯಾಡಿದ್ದ ಎಂದು ಆರೋಪಿಸಲಾಗಿತ್ತು.
ಸ್ಥಳೀಯ ಬಿಶ್ನೋಯ್ ಸಮುದಾಯ ಪ್ರತಿಭಟನೆ ನಡೆಸಿದ್ದರಿಂದ ಬಳಿಕ ತಡವಾಗಿ ಸಲ್ಮಾನ್ ಖಾನ್ ಹಾಗೂ ಇತರ ಕಲಾವಿದರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
Next Story





