ಗುಜರಾತ್‌ನಲ್ಲಿ ವಿವಿಪಿಎಟಿ ಮೂಲಕ ಚುನಾವಣೆ ನಡೆಸ ಬಾರದೇಕೆ?
ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ಹೊಸದಿಲ್ಲಿ, ಜು. 6: ಮುಂಬರುವ ವಿಧಾನ ಸಭೆ ಚುನಾವಣೆಯನ್ನು ಮತ ದೃಢೀಕರಣ ಘಟಕ (ವಿವಿಪಿಎಟಿ)ದ ಮೂಲಕ ನಡೆಸಿ ಎಂದು ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದೆ.
ಎಷ್ಟು ವಿವಿಪಿಎಟಿ ಇದೆ ಎಂಬ ಬಗ್ಗೆ ನಾಲ್ಕು ವಾರಗಳಲ್ಲಿ ಅಫಿದವಿತ್ ದಾಖಲು ಮಾಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತಿಳಿಸಿದೆ. ಅರ್ಜಿದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, ಗುಜರಾತ್ ವಿಧಾನ ಸಭಾ ಚುನಾವಣೆಯನ್ನು ವಿವಿಪಿಎಟಿ ಮೂಲಕ ನಡೆಸಿ. ಒಟ್ಟು 71 ಸಾವಿರ ವಿವಿಪಿಎಟಿಗಳ ಅಗತ್ಯವಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ವಿವಿಪಿಎಟಿಗಳನ್ನು ಹೊಂದಲು ನಾವು ಈಗಾಗಲೇ 3,500 ಕೋಟಿ ರೂ. ನೀಡಿದ್ದೇವೆ ಎಂದರು.
Next Story





