ಭಾರತ ಬ್ರಿಟನ್‌ನ 4ನೆ ಅತಿ ದೊಡ್ಡ ಹೂಡಿಕೆದಾರ

ಲಂಡನ್, ಜು. 6: ಭಾರತ ಒಂದು ಸ್ಥಾನ ಕೆಳಕ್ಕಿಳಿದು ಬ್ರಿಟನ್‌ನ ನಾಲ್ಕನೆ ಅತಿ ದೊಡ್ಡ ವಿದೇಶಿ ಹೂಡಿಕೆದಾರ ದೇಶವಾಗಿದೆ ಎಂದು ಗುರುವಾರ ಇಲ್ಲಿ ಬಿಡುಗಡೆಗೊಂಡ ಅಧಿಕೃತ ಅಂಕಿಸಂಖ್ಯೆಗಳು ಹೇಳಿವೆ.
ಮೊದಲ ಸ್ಥಾನದಲ್ಲಿ ಅಮೆರಿಕವಿದ್ದು, ಬ್ರಿಟನ್‌ನ 577 ಯೋಜನೆಗಳಲ್ಲಿ ಹೂಡಿಕೆ ನಡೆಸಿದೆ. 160 ಯೋಜನೆಗಳಲ್ಲಿ ಹೂಡಿಕೆ ಮಾಡುವುದರೊಂದಿಗೆ ಚೀನಾ (ಹಾಂಕಾಂಗ್ ಒಳಗೊಂಡು) ಎರಡನೆ ಸ್ಥಾನದಲ್ಲಿದೆ.
ಭಾರತ ಕಳೆದ ವರ್ಷ 127 ನೂತನ ಯೋಜನೆಗಳಲ್ಲಿ ಹೂಡಿಕೆ ಮಾಡಿ, 7,645 ಉದ್ಯೋಗಗಳನ್ನು ಉಳಿಸಿತು ಹಾಗೂ 2016-17ರಲ್ಲಿ 3,999 ನೂತನ ಹುದ್ದೆಗಳನ್ನು ಸೃಷ್ಟಿಸಿತು.
ಆದಾಗ್ಯೂ, ಕಳೆದ ವರ್ಷ ಅದು ತೃತೀಯ ಅತ್ಯಂತ ದೊಡ್ಡ ಹೂಡಿಕೆದಾರನ ಸ್ಥಾನವನ್ನು ಫ್ರಾನ್ಸ್‌ಗೆ ಬಿಟ್ಟುಕೊಟ್ಟಿತು.
ಭಾರತ ನಾಲ್ಕನೆ ಸ್ಥಾನವನ್ನು ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್‌ಗಳೊಂದಿಗೆ ಹಂಚಿಕೊಂಡಿದೆ.
Next Story





