ಆರೋಪಿ ಚಾಲಕನಿಗೆ ಶಿಕ್ಷೆ, ದಂಡ
ಅಪಘಾತದಲ್ಲಿ ಪ್ರಯಾಣಿಕ ಸಾವು ಪ್ರಕರಣ
ಉಡುಪಿ, ಜು.6: 2013ರ ಫೆ.10ರಂದು ಸಂಜೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ಅಟೋರಿಕ್ಷಾ ಚಲಾಯಿಸಿ ಅಪಘಾತದಿಂದ ಪ್ರಯಾಣಿಕರೊಬ್ಬರ ಸಾವಿಗೆ ಕಾರಣರಾದ ರಿಕ್ಷಾ ಚಾಲಕನಿಗೆ ಉಡುಪಿಯ ನ್ಯಾಯಾಲಯ ಒಂದು ವರ್ಷದ ಜೈಲುಶಿಕ್ಷೆ ಹಾಗೂ 4,000ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಅಟೋರಿಕ್ಷಾ ಚಾಲಕನಾದ ರವಿಚಂದ್ರ ಎಂಬಾತ ತನ್ನ ರಿಕ್ಷಾವನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಮಣಿಪಾಲ ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ ಚಲಾಯಿಸಿಕೊಂಡು ಬಂದು ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ರಸ್ತೆ ಮಧ್ಯದ ಡಿವೈಡರಿಗೆ ಢಿಕ್ಕಿ ಹೊಡೆದ ರಭಸದಲ್ಲಿ ಅಟೋ ರಿಕ್ಷಾವು ಏಕಮುಖ ಸಂಚಾರದ ಇನ್ನೊಂದು ಮಗ್ಗುಲಿಗೆ ಮಗುಚಿ ಬಿದ್ದು ರಿಕ್ಷಾದ ಹಿಂಬದಿಯಲ್ಲಿ ಕುಳಿತಿದ್ದ ಶ್ಯಾಮ್ ಮತ್ತು ಲಕ್ಷ್ಮಣ ತೀವ್ರವಾಗಿ ಗಾಯಗೊಂಡಿದ್ದರು.
ಬಳಿಕ ಲಕ್ಷ್ಮಣ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದರು. ಈ ಬಗ್ಗೆ ಉಡುಪಿ ಠಾಣೆಯ ಆಗಿನ ವೃತ್ತ ನಿರೀಕ್ಷಕ ಮಾರುತಿ ಜಿ ನ್ಯಾಕ್ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮಮ್ತಾಝ್ ವಾದ ಮಂಡಿಸಿದ್ದರು.





