ಬೈಕ್ ಢಿಕ್ಕಿ; ಸ್ಕೂಟಿ ಸವಾರ ಮೃತ್ಯು
ಅಜೆಕಾರು, ಜು.6: ಮೋಟಾರು ಸೈಕಲ್ ಒಂದು ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಸ್ಕೂಟಿಯಲ್ಲಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶಿರ್ಲಾಲು ಗ್ರಾಮದಲ್ಲಿ ನಡೆದಿದೆ.
ಚಂದ್ರಶೇಖರ್ ರಾವ್ ಎಂಬವರು ತಮ್ಮ ಸ್ಕೂಟಿಯಲ್ಲಿ ಬುಧವಾರ ಬೆಳಗ್ಗೆ 11:30ರ ಸುಮಾರಿಗೆ ಕೆರ್ವಾಶೆಯಿಂದ ಶಿರ್ಲಾಲು ಕಡೆ ತೆರಳುತಿದ್ದಾಗ ಅಂಡಾರು ಕಡೆಯಿಂದ ಕೆರ್ವಾಶೆಯತ್ತ ವೇಗವಾಗಿ ಧಾವಿಸಿ ಬಂದ ಮೋಟಾರು ಸೈಕಲ್ ಮುಖಾಮುಖಿ ಢಿಕ್ಕಿ ಹೊಡೆದಿತ್ತು. ಇದರಿಂದ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡ ಚಂದ್ರಶೇಖರ್ ರಾವ್ ಅವರನ್ನು ಮೊದಲು ಗಾಜ್ರಿಯಾ ಆಸ್ಪತ್ರೆಗೆ ಬಳಿಕ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಇಂದು ಬೆಳಗ್ಗೆ 11:45ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆಂದು ಪ್ರಕರಣ ದಾಖಲಿಸಿಕೊಂಡಿರುವ ಅಜೆಕಾರು ಪೊಲೀಸರು ತಿಳಿಸಿದ್ದಾರೆ.
Next Story





