ಇಬ್ಬಗೆ ಎಂಆರ್‌ಪಿ ಪದ್ದತಿಗೆ ನಿಷೇಧ

ಮುಂಬೈ, ಜು.6: ಶಾಪಿಂಗ್ ಮಾಲ್‌ಗಳು, ವಿಮಾನ ನಿಲ್ದಾಣ, ಹೋಟೆಲ್‌ಗಳಲ್ಲಿ ಮಾರಾಟ ಮಾಡುವ ವಸ್ತುಗಳಿಗೆ ಹೆಚ್ಚಿನ ಎಂಆರ್‌ಪಿ ವಿಧಿಸುವ (ಇಬ್ಬಗೆ ಎಂಆರ್‌ಪಿ) ಪದ್ದತಿಯನ್ನು ನಿಷೇಧಿಸಲು ಕೇಂದ್ರದ ಗ್ರಾಹಕ ವ್ಯವಹಾರ ಸಚಿವಾಲಯ ನಿರ್ಧರಿಸಿದೆ.
2018ರ ಜನವರಿ 1ರಿಂದ ಅನುಷ್ಠಾನಕ್ಕೆ ಬರಲಿರುವ ಈ ಆದೇಶದ ಪ್ರಕಾರ , ಕೆಲವು ಪ್ರಮುಖ ಪ್ರದೇಶಗಳಲ್ಲಿ ಮಾರಾಟ ಮಾಡುವ ನೀರು, ಲಘು ಪಾನೀಯ , ತಿನಿಸುಗಳಿಗೆ ಪ್ರತ್ಯೇಕ ದರ ವಿಧಿಸುವಂತಿಲ್ಲ.
ಇತರೆಡೆ ಮಾರಾಟ ಮಾಡುವ ವಸ್ತುಗಳ ಗುಣಮಟ್ಟ, ಪ್ರಮಾಣ ಅಥವಾ ತೂಕಕ್ಕೂ ಪ್ರಮುಖ ಪ್ರದೇಶಗಳಲ್ಲಿ ಮಾರಾಟ ಮಾಡಲಾಗುತ್ತಿರುವ ವಸ್ತುಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಆದ್ದರಿಂದ ಎರಡು ಬಗೆಯ ಎಂಆರ್‌ಪಿ ಬಳಸುವುದು ಸರಿಯಲ್ಲ ಎಂದು ಸಚಿವಾಲಯ ತಿಳಿಸಿದೆ.
ಲೀಗಲ್ ಮೆಟ್ರೊಲಜಿ ಆಫ್ ಮಹಾರಾಷ್ಟ್ರ (ಎಲ್‌ಎಂಒ) ಇಲಾಖೆ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಂತೆ ಇಬ್ಬಗೆ(ಎರಡು ರೀತಿಯ) ಎಂಆರ್‌ಪಿ ಪದ್ದತಿ ಕೈಬಿಡುವಂತೆ ಎಲ್‌ಎಂಒ ನೋಟಿಸ್ ಜಾರಿ ಮಾಡಿದೆ.
Next Story





