ಅಂಪೈರ್‌ರತ್ತ ನಾಣ್ಯಗಳನ್ನು ಎಸೆದ ರಶ್ಯದ ಆಟಗಾರ!
_(28133715871).jpg)
ಲಂಡನ್, ಜು.6: ವಿಂಬಲ್ಡನ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸ್ವಿಸ್‌ನ ಸ್ಟಾನಿ ವಾವ್ರಿಂಕಗೆ ಶಾಕ್ ನೀಡಿ ಸಾಧನೆಯ ಮೂಲಕ ಸುದ್ದಿಯಾಗಿದ್ದ ರಶ್ಯದ ಆಟಗಾರ ಡಾನಿಲ್ ಮೆಡ್ವೆಡೆವ್ ಇದೀಗ ದುರ್ವರ್ತನೆಯಿಂದ ಸುದ್ದಿಗೆ ಗ್ರಾಸವಾಗಿದ್ದಾರೆ.
ಮೆಡ್ವೆಡೆವ್ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ ಒಟ್ಟು 14,500 ಡಾಲರ್ ದಂಡ ವಿಧಿಸಿದೆ.
21ರ ಹರೆಯದ ಮೆಡ್ವೆಡೆವ್ ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದ ವೇಳೆ ಅಂಪೈರ್ ಕುಳಿತುಕೊಳ್ಳುವ ಕುರ್ಚಿಯತ್ತ ಎರಡು ಮುಷ್ಠಿ ನಾಣ್ಯಗಳನ್ನು ಎಸೆದಿದ್ದರು. ಅಂಪೈರ್ ತಾರತಮ್ಯ ಎಸೆಗಿದ್ದಾರೆಂದು ತಾನು ಈ ರೀತಿ ವರ್ತಿಸಿಲ್ಲ ಎಂದಿರುವ ಅವರು ತನ್ನ ಈ ಮೂರ್ಖತನದ ವರ್ತನೆಗೆ ಕ್ಷಮೆಯಾಚಿಸುವೆ ಎಂದಿದ್ದಾರೆ.
ಮೆಡ್ವೆಡೆವ್ ಬೆಲ್ಜಿಯಂ ಆಟಗಾರನ ವಿರುದ್ಧ 6-4, 6-2, 3-6, 2-6, 6-3 ಸೆಟ್‌ಗಳ ಅಂತರದಿಂದ ಸೋಲುವ ಮೂಲಕ ಕೂಟದಿಂದ ಹೊರ ನಡೆದಿದ್ದಾರೆ.
ಪಂದ್ಯದ ನಿರ್ಣಾಯಕ ಹಂತದಲ್ಲಿ 2-0 ಮುನ್ನಡೆಯಲ್ಲಿದ್ದ ಮೆಡ್ವೆಡೆವ್ ಮಹಿಳಾ ಅಂಪೈರ್ ಮರಿಯಾನಾ ಅಲ್ವೆಸ್‌ರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು. ಅವರ ಕೋರಿಕೆಯನ್ನು ನಿರಾಕರಿಸಲಾಯಿತು. ಪಂದ್ಯ ಕೊನೆಗೊಂಡ ಬಳಿಕ ಅಂಪೈರ್‌ಗಳ ಕೈಕುಲುಕಿದ ಮೆಡ್ವೆಡೆವ್ ತನ್ನ ಬ್ಯಾಗ್‌ನತ್ತ ತೆರಳಿ ಪರ್ಸ್‌ನಿಂದ ಎರಡು ಮುಷ್ಠಿ ನಾಣ್ಯಗಳನ್ನು ತೆಗೆದುಕೊಂಡು ಬಂದು ಅಂಪೈರ್ ಕುರ್ಚಿಯ ಮೇಲೆ ಸುರಿದರು.
ಆ ಕ್ಷಣದ ಕೋಪಕ್ಕೆ ತಾನು ಹೀಗೆ ಮಾಡಿದ್ದೆ. ನಾನು ಹಾಗೆ ಮಾಡಬಾರದಿತ್ತು. ನನ್ನ ತಪ್ಪಿಗೆ ಕ್ಷಮೆಯಾಚಿಸುವೆ. ಅದೊಂದು ದೀರ್ಘಕಾಲ ನಡೆದ ಪಂದ್ಯವಾಗಿದ್ದರಿಂದ ನಾನು ಸ್ವಲ್ಪ ಹತಾಶೆಯಲ್ಲಿದ್ದೆ. ನನ್ನ ವರ್ತನೆ ಮೂರ್ಖತನದಿಂದ ಕೂಡಿದೆ. ಅಂಪೈರ್‌ಗೆ ಅವಮಾನಿಸುವ ಉದ್ದೇಶ ನನಗಿರಲಿಲ್ಲ ಎಂದು ಮಡ್ವೆಡೆವ್ ಹೇಳಿದ್ದಾರೆ.
ಮಡ್ವೆಡೆವ್ 2016ರಲ್ಲಿ ಚಾರ್ಲ್ಸ್‌ಸ್ಟನ್‌ಕ್ಲೇ ಕೋರ್ಟ್ ಸ್ಪರ್ಧೆಯಲ್ಲಿ ಅಂಪೈರ್ ಸ್ಯಾಂಡಿ ಫ್ರೆಂಚ್ ಕರಿಯ ಆಟಗಾರ ಡೊನಾಲ್ಡ್ ಯಂಗ್ ಪರ ತೀರ್ಪು ನೀಡುತ್ತಾರೆಂದು ಆರೋಪಿಸಿ ಟೂರ್ನಿಯಿಂದ ಅನರ್ಹಗೊಂಡಿದ್ದರು.







