Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ತಳಸ್ತರದ ಬದುಕಿನ ಸಾಮಾಜಿಕ ಐಡೆಂಟಿಟಿಯ...

ತಳಸ್ತರದ ಬದುಕಿನ ಸಾಮಾಜಿಕ ಐಡೆಂಟಿಟಿಯ ಹುಡುಕಾಟ

​ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ6 July 2017 11:43 PM IST
share
ತಳಸ್ತರದ ಬದುಕಿನ ಸಾಮಾಜಿಕ ಐಡೆಂಟಿಟಿಯ ಹುಡುಕಾಟ

‘ಆಧುನಿಕತೆ, ರಾಷ್ಟ್ರ; ಕಾರಂತ-ಕುವೆಂಪು ಕಥನ’ ಕೃತಿಯ ಮೂಲಕ ಚಿಂತನಾ ಲೋಕಕ್ಕೆ ಪರಿಚಿತರಾಗಿರುವ ಡಾ. ಶ್ರೀನಿವಾಸ್ ಗಿಳಿಯಾರು ಅವರ ಎರಡನೆ ಕೃತಿ ‘ದಲಿತ ಅಭಿವೃದ್ಧಿ: ಸಾಹಿತ್ಯ-ಸಂಸ್ಕೃತಿ’. ವಂಚಿತ ಜನಬದುಕಿನ ನೆಲೆಗಳಲ್ಲಿ ನಿಂತು ನಡೆಸಿರುವ ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ ಜನಬದುಕಿನ ಓದುಗಳ ಹಲವು ಬಗೆಗಳು ಇಲ್ಲಿವೆ. ತಲಾ ಎಂಟು ಲೇಖನಗಳ ಎರಡು ಭಾಗಗಳು ಈ ಕೃತಿಯಲ್ಲಿವೆ. ಮೊದಲನೆಯ ಭಾಗದ ಲೇಖನಗಳಲ್ಲಿ ಬಹುತೇಕ ವರ್ತಮಾನ ರಾಜಕೀಯ ಬೆಳವಣಿಗೆಗಳ ಚರ್ಚೆಗಳನ್ನು ಒಳಗೊಂಡಿವೆ. ಶಿವರಾಮ ಕಾರಂತ, ನಿಸಾರ್ ಅಹಮದ್‌ರಂತಹ ಹಿರಿಯ ಲೇಖಕರ ಬರಹಗಳನ್ನು ಇಟ್ಟುಕೊಂಡು ವರ್ತಮಾನದ ಬೆಳವಣಿಗೆಗಳನ್ನು ವಿಶ್ಲೇಷಿಸಿದ್ದಾರೆ. ಶಿವರಾಮ ಕಾರಂತರ ಬರಹಗಳು ಪ್ರತಿನಿಧಿಸುವ ಜ್ಞಾನ ಮೀಮಾಂಸೆಯ ಸ್ವರೂಪ ಲೇಖನದಲ್ಲಿ ಕಾರಂತರ ಬರಹಗಳ ತಾತ್ವಿಕ ಭೂಮಿಕೆಯನ್ನು ಚರ್ಚಿಸುತ್ತಾ, ಸಮಾಜವಾದ, ಅಂಬೇಡ್ಕರ್‌ವಾದ, ಕಮ್ಯುನಿಸಂ ಇತ್ಯಾದಿ ಇಸಂಗಳನ್ನು ಸಾರಾಸಗಟಾಗಿ ನಿರಾಕರಿಸುವ ಕಾರಂತರ ಲಿಬರಲ್ ಹ್ಯೂಮನಿಸಂ ಹೊರಗಿನದ್ದಾಗದೇ ಅದನ್ನು ಅಂತರಂಗೀಕರಿಸಿಕೊಂಡಿದ್ದಾರೆ ಎಂದು ಅಭಿಪ್ರಾಯ ಪಡುತ್ತಾರೆ. ಕೆ. ಎಸ್. ನಿಸಾರ್ ಅಹಮದರ ‘ಎಲ್ಲೆಲ್ಲಿಯೂ ಬರಿಯ ಚಿಹ್ನೆ’ ಕವಿತೆಯನ್ನು ಇಟ್ಟುಕೊಂಡು ವೈವಿಧ್ಯ ಐಕ್ಯ ಮತ್ತು ಅಭಿವೃದ್ಧಿಯನ್ನು ಚರ್ಚಿಸುತ್ತಾರೆ. ಲಕ್ಷ್ಮಣ್ ಅವರ ವ್ಯಂಗ್ಯರೇಖೆಗಳಲ್ಲಿ ಭಾರತೀಯ ಶ್ರೀಸಾಮಾನ್ಯ ಹೇಗೆ ಮೂಡಿ ಬಂದಿದ್ದಾನೆ ಎನ್ನುವುದನ್ನು ‘ಲಕ್ಷ್ಮಣ ರೇಖೆ’ಯಲ್ಲಿ ಭಾರತೀಯ ಶ್ರೀಸಾಮಾನ್ಯ ಲೇಖನದಲ್ಲಿ ಬರೆಯುತ್ತಾರೆ. ಲಕ್ಷ್ಮಣ್ ಬಿಡಿಸಿದ ವ್ಯಂಗ್ಯ ಚಿತ್ರಗಳು ವಾಸ್ತವವನ್ನು ಅನಿವಾರ್ಯವೆಂದು ಒಪ್ಪಿಕೊಳ್ಳುವ ತಾತ್ವಿಕ ಆಯಾಮಗಳನ್ನು ಸ್ಥಿರೀಕರಿಸುತ್ತಿವೆಯೇ? ಎಂಬ ಪ್ರಶ್ನೆಯನ್ನು ಲೇಖಕರು ಎತ್ತುತ್ತಾರೆ. ಎರಡನೆ ಭಾಗದಲ್ಲಿರುವ ಬಹುತೇಕ ಲೇಖನಗಳು ಅಸ್ಪಶ್ಯತೆ, ಜಾತಿ ಐಡೆಂಟಿಟಿಗಳ ಕುರಿತಂತೆ ಚರ್ಚಿಸುತ್ತವೆ. ಬೆವರು ಹರಿಸಿ ದುಡಿವ ಜಾತಿ ಗುಂಪುಗಳ ತಳಮಟ್ಟದ ಬದುಕಿನ ಸಾಮಾಜಿಕ ಐಡೆಂಟಿಟಿಯ ಹುಡುಕಾಟದಲ್ಲಿ ತೊಡಗುತ್ತವೆ ಈ ಲೇಖನಗಳು. ಚಿಂತನ ಬಯಲು ಪ್ರಕಾಶನ ಬಂಟ್ವಾಳ ಹೊರತಂದಿರುವ ಈ ಕೃತಿಯ ಮುಖಬೆಲೆ 120 ರೂ. ಆಸಕ್ತರು 94497 72651 ದೂರವಾಣಿಯನ್ನು ಸಂಪರ್ಕಿಸಬಹುದು.
 

share
-ಕಾರುಣ್ಯಾ
-ಕಾರುಣ್ಯಾ
Next Story
X